ಬೆಂಗಳೂರು ಮೂಲದ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಅನಾಕಾಡೆಮಿ ಗಣತಂತ್ರೋತ್ಸವದಂದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿನಯದ ಜಾಹೀರಾತು ಚಿತ್ರವನ್ನು ಬಿಡುಗಡೆ ಮಾಡಿದೆ.
ಲೆಸನ್ ನಂ 7 ಎಂಬ ಶೀರ್ಷಿಕೆಯ ಜಾಹೀರಾತಿನಲ್ಲಿ ಧೋನಿ ತಮ್ಮ ದಾರಿಯಲ್ಲಿ ಬರುವ ಹಲವಾರು ಅಡೆತಡೆಗಳನ್ನು ಹೊಂದಿರುವ ರೈಲನ್ನು ಮೀರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಧೋನಿ ರೈಲನ್ನು ಮೀರಿಸುವ ಪ್ರಯತ್ನದಲ್ಲಿ ಓಡಿ, ಜಿಗಿಯುತ್ತಾ ಗೋಡೆಗಳ ಮೂಲಕ ಅಪ್ಪಳಿಸುತ್ತಿರುವಾಗ ಅವರ ಕಡೆಗೆ ಮುನ್ನುಗ್ಗುತ್ತಿರುವ ಉಲ್ಕೆಯೊಂದು ಉದ್ವೇಗ ಹೆಚ್ಚಿಸುತ್ತದೆ.
ಟೀಂ ಇಂಡಿಯಾದ ಈ ಆಟಗಾರರಿಗೆ ಪ್ರಾಣಿಗಳೆಂದ್ರೆ ಪಂಚ ಪ್ರಾಣ…!
ಧೋನಿ ತನ್ನ ವೃತ್ತಿಜೀವನದಲ್ಲಿ ಜಯಿಸಲು ಮಾಡಬೇಕಾದ ಹೋರಾಟಗಳನ್ನು ಪ್ರತಿನಿಧಿಸುವ ಈ ಅಡೆತಡೆಗಳನ್ನು ರಚಿಸಲು ವಿಶೇಷ ಎಫೆಕ್ಟ್‌ಗಳನ್ನು ಬಳಸಲಾಯಿತು. ಅಕಾಡೆಮಿ ಸಂಸ್ಥಾಪಕ ಮತ್ತು ಸಿಇಒ ಗೌರವ್ ಮುಂಜಾಲ್ ಪ್ರಕಾರ, ಜಾಹೀರಾತು ಚಿತ್ರವು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಂಡಿದೆ.
“ನಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಐಕಾನಿಕ್ ಚಿತ್ರ. ಇದನ್ನು ತಯಾರಿಸಲು ಸುಮಾರು ಒಂದು ವರ್ಷ ಬೇಕಾಯಿತು,” ಎಂದು ಮುಂಜಾಲ್ ಟ್ವಿಟರ್‌ನಲ್ಲಿ ವಿಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.
ಧೋನಿ ಅಭಿನಯದ ಜಾಹೀರಾತನ್ನು ಆನ್ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಯೂಟ್ಯೂಬ್‌ನಲ್ಲಿ 1.2 ಮಿಲಿಯನ್ ಮತ್ತು ಟ್ವಿಟರ್‌ನಲ್ಲಿ ಹಲವಾರು ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
“ವಾವ್! ಇದು ಹೆಲಿಕಾಪ್ಟರ್ ಶಾಟ್‌ನಷ್ಟೇ ಚೆನ್ನಾಗಿದೆ,” ಎಂದು ಜಾಹೀರಾತನ್ನು ಕಂಡ ವೀರೇಂದ್ರ ಸೆಹ್ವಾಗ್ ಹೇಳಿದರೆ, ಹರ್ಷಾ ಭೋಗ್ಲೆ,”ಅಡಚಣೆಗಳನ್ನು ಮೀರಿ ನಿಲ್ಲುವ ಬಗ್ಗೆ ಧೋನಿಗಿಂತ ಚೆನ್ನಾಗಿ ಮಾತನಾಡುವ ಮಂದಿ ಕೆಲವೇ ಕೆಲವರು ಇದ್ದಾರೆ,” ಎಂದಿದ್ದಾರೆ.