ಮನುಷ್ಯನ ನಿರೀಕ್ಷೆಗೆ ಮೀರಿದ್ದು ಪ್ರಾಣಿ-ಪಕ್ಷಿ ಪ್ರಪಂಚ. ಅವುಗಳ ಬಗ್ಗೆ ತಿಳಿದಷ್ಟೂ ಕುತೂಹಲವೇ. ಅಂಥದ್ದೇ ಒಂದು ಸಮುದ್ರ ನೀರುನಾಯಿಗಳ (Sea otters) ಪ್ರಪಂಚ. ಅದರ ಪುಟ್ಟದೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಸಮುದ್ರ ನೀರುನಾಯಿಗಳ ಅತ್ಯಂತ ಗಮನಾರ್ಹವಾದ ವಿಶಿಷ್ಟ ಲಕ್ಷಣವೆಂದರೆ ಅವುಗಳು ನಿದ್ದೆ ಮಾಡುವಾಗ ಒಬ್ಬರೊಬ್ಬರ ಕೈಗಳನ್ನು ಹಿಡಿದಿಟ್ಟುಕೊಳ್ಳುವುದು. ಈ ಸಮುದ್ರ ಪ್ರಾಣಿಗಳು ಸಾಮಾನ್ಯವಾಗಿ ಪರಸ್ಪರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿದ್ದೆ ಮಾಡುತ್ತವೆ, ಒಬ್ಬರೇ ಇದ್ದರೆ ಕಡಲಕಳೆಗಳನ್ನು ಲಂಗರು ಹಾಕಲು ಬಳಸುತ್ತವೆ, ಇದರಿಂದ ಅವುಗಳು ನೀರಿನಲ್ಲಿ ದೂರ ಹೋಗುವುದಿಲ್ಲ.
ಫ್ಯಾಸಿನೇಟಿಂಗ್ ಹೆಸರಿನ ಟ್ವಿಟರ್ನಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಎರಡು ಸಮುದ್ರದ ನೀರುನಾಯಿಗಳನ್ನು ನಾವು ಕಾಣಬಹುದು. ಮೊದಲಿಗೆ ಪ್ರತ್ಯೇಕವಾಗಿದ್ದ ಇವು, ನಂತರ ನಿದ್ರಿಸುವ ಸಮಯದಲ್ಲಿ ಪರಸ್ಪರ ಕೈಗಳನ್ನು ಹಿಡಿದಿಟ್ಟುಕೊಂಡಿರುವುದನ್ನು ನೋಡಬಹುದಾಗಿದೆ. ಒಂದು ಕಪ್ಪು ಮತ್ತು ಇನ್ನೊಂದು ಬಿಳಿ ಬಣ್ಣದ ಈ ಪ್ರಾಣಿಗಳು ಹೊಳೆಯುವ ನೀರಿನಲ್ಲಿ ತೇಲುವುದನ್ನು ನೋಡುವುದೇ ಖುಷಿ. ಈ ವಿಡಿಯೋ ಕೇವಲ ಆರು ಸೆಕೆಂಡ್ ಇದ್ದರೂ ನೋಡುಗರನ್ನು ಉಲ್ಲಾಸಭರಿತವಾಗಿಸುತ್ತವೆ.
https://twitter.com/fasc1nate/status/1577886999633186818?ref_src=twsrc%5Etfw%7Ctwcamp%5Etweetembed%7Ctwterm%5E1577886999633186818%7Ctwgr%5E764230ddf4db889b2dac2b9d768f1b37dd64323b%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-these-otters-holding-hands-while-sleeping-are-pure-joy-6261253.html