ತೆಲಂಗಾಣ: ತೆಲಂಗಾಣದ ಉದ್ಯಮಿಯ ‘ವಾಹನ ಪೂಜೆ’ ಆಚರಣೆ ಇದೀಗ ಭಾರಿ ಸುದ್ದಿಯಾಗಿದೆ. ಹಿಂದೂ ಧರ್ಮಿಯರು ‘ವಾಹನ ಪೂಜೆ’ಯನ್ನು ಕುಟುಂಬದೊಂದಿಗೆ ಸಾಮರಸ್ಯದಿಂದ ಬೆರೆಯಲು ಮತ್ತು ಭವಿಷ್ಯದ ದುರಂತಗಳನ್ನು ತಪ್ಪಿಸಲು ಆಶೀರ್ವದಿಸುತ್ತದೆ ಎಂದು ನಂಬಿದ್ದಾರೆ. ಆದರೆ ತೆಲಂಗಾಣದ ಉದ್ಯಮಿ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಅವರ ವಾಹನ ಪೂಜೆ ಮಾತ್ರ ಈಗ ವೈರಲ್ ಆಗುತ್ತಿದೆ.
ಇದಕ್ಕೆ ಕಾರಣ, ಇವರು ಪೂಜೆಗಾಗಿ ಕೊಂಡೊಯ್ದಿದ್ದ ವಾಹನ ಹೆಲಿಕಾಪ್ಟರ್! ದೇವರ ಆಶೀರ್ವಾದಕ್ಕಾಗಿ ದೇವಸ್ಥಾನಕ್ಕೆ ಹೆಲಿಕಾಪ್ಟರ್ ಹಾರಿಸಿ ಇವರು ಸುದ್ದಿ ಮಾಡಿದ್ದಾರೆ.
ಅಂದಹಾಗೆ ಇವರು, ಭಾರತೀಯ ಮೂಲಸೌಕರ್ಯ ಕಂಪೆನಿಯಾದ ಪ್ರತಿಮಾ ಗ್ರೂಪ್‌ನ ಮಾಲೀಕರು. ಅವರು ಇತ್ತೀಚೆಗೆ ಏರ್‌ಬಸ್ ACH-135 ಮಾದರಿಯ ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ ಮತ್ತು ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಇದನ್ನು ಹಾರಿಸಿ ಕೊಂಡೊಯ್ದಿದ್ದಾರೆ. ಈ ಪವಿತ್ರ ಸ್ಥಳವು ಹೈದರಾಬಾದ್‌ನಿಂದ 100 ಕಿಲೋಮೀಟರ್ ದೂರದಲ್ಲಿರುವ ಯಾದದ್ರಿಯಲ್ಲಿದೆ. ಹೊಸ ವಾಹನವನ್ನು ದೇವಸ್ಥಾನದ ಆವರಣಕ್ಕೆ ಕೊಂಡೊಯ್ಯುವ ಉದ್ದೇಶವು ‘ವಾಹನ ಪೂಜೆ’ ನಡೆಸುವುದಾಗಿತ್ತು.
ಪ್ರಸಿದ್ಧ ದೇವಸ್ಥಾನದ ಮೂವರು ಅರ್ಚಕರು ನಡೆಸಿದ ಧಾರ್ಮಿಕ ಕ್ರಿಯೆಯಲ್ಲಿ ಉದ್ಯಮಿ ಭಾಗವಹಿಸಿದ್ದರು. ವರದಿಯ ಪ್ರಕಾರ ಹೊಸ ವಾಹನದ ಬೆಲೆಯು ಸುಮಾರು $5.7 ಮಿಲಿಯನ್ (ಅಂದಾಜು ರೂ. 40 ಕೋಟಿ). ಈ ಪೂಜೆಯ ವಿಡಿಯೋ ವೈರಲ್ ಆಗಿದೆ.