ಡಿಜಿಟಲ್ ಡೆಸ್ಕ್ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2023 ರ ಸೂಪರ್ ಹಿಟ್ ಚಿತ್ರ ‘ಜೈಲರ್ ‘ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಜೈಲರ್-2 ಚಿತ್ರದ ಟೀಸರ್ ರಿಲೀಸ್ ಆಗಿದೆ .
ವಿಶ್ವದಾದ್ಯಂತ 650 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದ ಮೊದಲ ಭಾಗದಂತೆಯೇ ಜೈಲರ್ 2 ಕೂಡ ಸಾಕಷ್ಟು ಭರವಸೆ ಮೂಡಿಸಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್ ಟೈನರ್ ‘ಜೈಲರ್ 2’ ಚಿತ್ರವನ್ನು ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದಾರೆ. ಚಿತ್ರವನ್ನು ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್, ಪೊಂಗಲ್ ಹಬ್ಬದ ಶುಭ ದಿನದಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ.