alex Certify ಬಂಗುಸ್ ವ್ಯಾಲಿಯ ಅದ್ಭುತ ದೃಶ್ಯ ಕಂಡು ನೆಟ್ಟಿಗರಿಗೆ ವಿಸ್ಮಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಗುಸ್ ವ್ಯಾಲಿಯ ಅದ್ಭುತ ದೃಶ್ಯ ಕಂಡು ನೆಟ್ಟಿಗರಿಗೆ ವಿಸ್ಮಯ

ಕಾಶ್ಮೀರವನ್ನು ಸಾಮಾನ್ಯವಾಗಿ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಟ್ವಿಟರ್​ನಲ್ಲಿ ವೈರಲ್​ ಆಗುತ್ತಿರುವ ಇತ್ತೀಚಿನ ವಿಡಿಯೊವು ಕಾಶ್ಮೀರದ ನೆಲದ ಸೌಂದರ್ಯವು ಅದರ ಖ್ಯಾತಿಗೆ ಹೇಗೆ ಪೂರಕವಾಗಿದೆ ಎಂಬುದನ್ನು ತೋರಿಸುತ್ತದೆ.

ನಾರ್ವೇಯನ್​ ರಾಜತಾಂತ್ರಿಕ ಎರಿಕ್​ ಸೋಲ್ಹೈಮ್​ ಹಂಚಿಕೊಂಡ ಕ್ಲಿಪ್​ನಲ್ಲಿ, ಬ್ಯಾಂಗಸ್​ ವ್ಯಾಲಿಯ ಸೊಬಗು ಕಾಣಿಸುತ್ತದೆ. ಸಮೃದ್ಧವಾದ ಹಸಿರು ಹುಲ್ಲಿನ ಮಧ್ಯೆ ಕುದುರೆಗಳು ಶಾಂತಿಯುತವಾಗಿ ಮೇಯುತ್ತಿರುವಾಗ, ಹಿಂದೆ ಹರಿಯುವ ತೊರೆಗಳು ಅಲ್ಲಿನ ಪ್ರಕೃತಿ ಶ್ರೀಮಂತಿಕೆಯನ್ನು ಎತ್ತಿತೋರಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಬಂಗುಸ್​ ಕಣಿವೆಯು ಸಸ್ಯ ಮತ್ತು ಪ್ರಾಣಿಗಳ ಶ್ರೀಮಂತ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಚಿಕ್ಕ ವಿಡಿಯೊವನ್ನು ಹಂಚಿಕೊಂಡ ಸೋಲ್ಹೈಮ್​, ಇನ್ಕ್ರೆಡಿಬಲ್​ ಇಂಡಿಯಾ ! ಈ ಸ್ವರ್ಗವು ಜಮ್ಮು ಮತ್ತು ಕಾಶ್ಮೀರದಲ್ಲಿದೆ, ಇದನ್ನು ಬಂಗುಸ್​ ಕಣಿವೆ ಎಂದು ಕರೆಯಲಾಗುತ್ತದೆ ಎಂದು ವರ್ಣಿಸಿದ್ದಾರೆ.

ಸೆಪ್ಟೆಂಬರ್​ 10ರಂದು ಪೋಸ್ಟ್​ ಮಾಡಿದ ನಂತರ ವೀಡಿಯೊ ಒಂದು ಲಕ್ಷದಷ್ಟು ವೀಕ್ಷಣೆ ಕಂಡಿದೆ. ವೀಡಿಯೋವನ್ನು ಶ್ಲಾಘಿಸಿ ಟ್ವಿಟ್ಟರ್​ ಬಳಕೆದಾರರು ಧನ್ಯವಾದ ಅರ್ಪಿಸಿದ್ದಾರೆ. ನೀವು ಈ ಸುಂದರವಾದ ವೀಡಿಯೊವನ್ನು ಹಂಚಿಕೊಂಡಿದ್ದೀರಿ ಇಲ್ಲದಿದ್ದರೆ ಇಲ್ಲಿ ಕೆಲವರು, ಕೇವಲ ಸ್ವಿಟ್ಜರ್ಲೆಂಡ್​ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

ಅಕ್ಟೋಬರ್​ 2021ರಲ್ಲಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಈ ಪ್ರದೇಶದ ಪ್ರಸಿದ್ಧ ಪಿರ್​ ಪಂಜಾಲ್​ ಪರ್ವತ ಶ್ರೇಣಿಯ ಫೋಟೋ ಹಂಚಿಕೊಂಡಿದ್ದರು. ಕಾಶ್ಮೀರವನ್ನು “ಭಾರತದ ಕಿರೀಟದಲ್ಲಿನ ರತ್ನ” ಎಂದು ಕರೆದಿದ್ದ ಅಮಿತ್​ ಷಾ, ವಿಶಾಲವಾದ ಹಿಮಾಲಯ ಶ್ರೇಣಿಯ ನಾಲ್ಕು ಚಿತ್ರಗಳನ್ನು ಹಂಚಿಕೊಂಡು, ಕಣಿವೆಗೆ ಭೇಟಿ ನೀಡುವಂತೆ ಪ್ರವಾಸಿಗರನ್ನು ಕೋರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...