ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಉಡುಪಿನೊಂದಿಗೆ ಜಲ್ಮುರಿ (ಮಸಾಲೆಯುಕ್ತ ಅಕ್ಕಿ) ಬಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ.
ಈ ವಿಡಿಯೋದಲ್ಲಿ ಪುರುಷನು ಔಪಚಾರಿಕ ಉಡುಪುಗಳನ್ನು ಧರಿಸಿದ್ದಾನೆ ಮತ್ತು ಟೈ ಅನ್ನು ಸಹ ಧರಿಸಿದ್ದಾನೆ. ಈತನ ವೇಷಭೂಷಣ ನೋಡಿದರೆ ಈತ ಕಾರ್ಪೊರೇಟ್ ಕಚೇರಿಯಲ್ಲಿ ಕೆಲಸ ಮಾಡುವಂತೆ ಕಾಣಿಸುತ್ತದೆ. ನಂತರ ಈತ ಬೀದಿ ವ್ಯಾಪಾರಿ ಎಂದು ಕಂಡುಬರುತ್ತದೆ.
ಈ ವಿಡಿಯೋವನ್ನು ಬಳಕೆದಾರರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಲಾಸ್ ಪೊಲೊಸ್ ಹರ್ಮನೋಸ್ ಜಲ್ಮುರಿ ಕಾರ್ನರ್” ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ.
ಬೀದಿ ವ್ಯಾಪಾರಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಹಲವಾರು ಬಳಕೆದಾರರು ಈತ ಪ್ರಸಿದ್ಧ ವೆಬ್‌ಸೀರಿಸ್ ನಟ ಗಸ್ ಫ್ರಿಂಗ್‌ನಂತೆಯೇ ಇದ್ದಾರೆ ಎನ್ನುತ್ತಿದ್ದಾರೆ. ಅದಕ್ಕಾಗಿಯೇ ಕಮೆಂಟ್‌ಗಳ ವಿಭಾಗದಲ್ಲಿ, “ಗುಸ್ತಾವೊ ಸಿಂಗ್” ಎಂದು ತಮಾಷೆಯಾಗಿ ಕರೆದ್ದಾರೆ. ಕೆಲವರು “ಗುಸ್ತಾವೊ ಚಟರ್ಜಿ” ಎಂದು ಬರೆದಿದ್ದಾರೆ.