ಭಾರತೀಯರಿಗೆ ದೇವಸ್ಥಾನಗಳಲ್ಲಿ ಸಿಗುವ ಪ್ರಸಾದದ ಊಟದ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ಸಿಂಪಲ್ ಆಗಿ ಅತ್ಯಂತ ರುಚಿಕರವಾದ ಊಟ ಸಿಗೋದು ದೇವಸ್ಥಾನಗಳಲ್ಲಿ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ.
ಈ ಸಾಮುದಾಯಿಕ ಭೋಜನದಲ್ಲಿ ಭಕ್ತರನ್ನು ನೆಲದಲ್ಲಿ ಕುಳ್ಳಿರಿಸಿ ಊಟವನ್ನು ಬಡಿಸಲಾಗುತ್ತದೆ. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿರುವ ಇಸ್ಕಾನ್ ದೇಗುಲದಲ್ಲಿಯೂ ಸಾಮೂಹಿಕ ಭೋಜನ ವ್ಯವಸ್ಥೆ ಇದೆ. ಇಲ್ಲಿ ಅಡುಗೆ ಸಿಬ್ಬಂದಿ ಊಟ ಬಡಿಸುವ ವೇಗ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕಮಲೇಶ್ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಸ್ಕಾನ್ ದೇಗುಲಕ್ಕೆ ನಿತ್ಯ ಪ್ರಸಾದ ಊಟಕ್ಕೆ ಬರುತ್ತಾರೆ. ಸರತಿ ಸಾಲಿನಲ್ಲಿ ಬಂದ ಜನರಿಗೆ ದೇವಸ್ಥಾನದ ಸಿಬ್ಬಂದಿ ಕೂಪನ್ ನೀಡಿದ್ದಾರೆ. ಆವರಣ ಪ್ರವೇಶಿಸಿದ ಬಳಿಕ ಭಕ್ತರು ನೆಲದ ಮೇಲೆ ಕುಳಿತುಕೊಳ್ತಾರೆ. ಅವರಿಗೆ ಲೋಟ ಹಾಗೂ ತಟ್ಟೆಯನ್ನು ನೀಡಲಾಗುತ್ತದೆ .
ಅಡುಗೆ ಸಿಬ್ಬಂದಿ ಮಿಂಚಿನ ವೇಗದಲ್ಲಿ ಭಕ್ತರಿಗೆ ಊಟ ಬಡಿಸಿದ್ದಾರೆ. ಬೃಹತ್ ಆಲ್ಯುಮಿನಿಯಂ ಪಾತ್ರೆಗಳಿಗೆ ಚಕ್ರವನ್ನು ಜೋಡಿಸಲಾಗಿದೆ. ಇವುಗಳ ಮೇಲೆ ಹತ್ತಿಕೊಂಡ ಸಿಬ್ಬಂದಿ ಎಷ್ಟು ಸಮತೋಲನದಿಂದ ಜಾರಿದ್ದಾರೆ ಎಂದರೆ ಇದನ್ನು ನೋಡಿದವರೆ ವಿಸ್ಮಯರಾಗಿದ್ದಾರೆ. ಇಷ್ಟೊಂದು ವೇಗದಲ್ಲಿ ಅಷ್ಟೇ ಅಚ್ಚುಕಟ್ಟಾಗಿ ಊಟ ಬಡಿಸೋದು ಹೇಗೆ ಸಾಧ್ಯ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.