ಬನಾರಸ್ನಲ್ಲಿ ಬಿಳಿ ಬಟ್ಟೆ ಧರಿಸಿ ಭೂತಪ್ರೇತವೊಂದು ಮನೆಗಳ ಮೇಲ್ಛಾವಣಿಯಲ್ಲಿ ನಡೆದಾಡುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲಿನ ಜನ ಪೊಲೀಸರ ನೆರವು ಕೋರಿದ್ದಾರಂತೆ.
ವೆೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಿಳಿ ಬಟ್ಟೆ ತೊಟ್ಟ ವ್ಯಕ್ತಿ ಮನೆ ಮೇಲ್ಛಾವಣಿಯ ಮೇಲೆ ನಡೆಯುವುದನ್ನು ಕಾಣಬಹುದು. ಭೇಲುಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ ಕಾಲೋನಿಯಲ್ಲಿರುವ ಉದ್ಯಾನವನದ ಸುತ್ತಮುತ್ತ ವಾಸಿಸುವ ಜನರಿಗೆ ಇದು ದುಃಸ್ವಪ್ನವಾಗಿ ಕಾಡುತ್ತಿದ್ದು, ದೆವ್ವದ ಹಿಂದಿನ ನೈಜ ಕತೆಯನ್ನು ಪತ್ತೆಹಚ್ಚಲು ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸ್ಥಳಿಯರ ಹಲವಾರು ದೂರುಗಳ ನಂತರ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಭೇಲುಪುರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಮಾಕಾಂತ್ ದುಬೆ ಈ ಬಗ್ಗೆ ಮಾಹಿತಿ ನೀಡಿ, ಜನರಲ್ಲಿ ಭಯವಿದೆ. ಅವರ ದೂರಿನ ಮೇರೆಗೆ ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ.ಪ್ರದೇಶದಲ್ಲಿ ಗಸ್ತು ತೀವ್ರಗೊಳಿಸಿದ್ದೇವೆ ಎಂದಿದ್ದಾರೆ.
ವಿಡಿಎ ಕಾಲೋನಿಯಲ್ಲಿರುವ ಉದ್ಯಾನವನದ ಸುತ್ತಲೂ ಮಹಿಳೆಯೊಬ್ಬರು ಬಿಳಿ ಗೌನ್ನಲ್ಲಿ ಓಡಾಡುತ್ತಿದ್ದಾರೆ ಎಂಬ ಗೊಂದಲದಿಂದ ಆತಂಕ ಪ್ರಾರಂಭವಾಯಿತು. ಈ ವೇಳೆ ಭಯಭೀತರಾಗಿ ಸ್ಥಳಿಯರು ಮನೆಯಿಂದ ಹೊರಗೆ ಬರುವುದನ್ನೂ ನಿಲ್ಲಿಸಿದ್ದಾರೆ. ಕೆಲವು ಸ್ಥಳಿಯರಿಗೆ, ವೀಡಿಯೋ ಅಸಲಿಯಾಗಿ ಕಂಡಿದ್ದು ಆದರೆ ಬಹುಪಾಲು ಜನರು ಅದನ್ನು ನಕಲಿ ವೀಡಿಯೊ ಎಂದಿದ್ದಾರೆ.
ಈ ಹಿಂದೆ, ಯುನೈಟೆಡ್ ಸ್ಟೇಟ್ಸ್ನ ಮಹಿಳೆಯೊಬ್ಬರು ಕೆಂಟುಕಿಯ ತಮ್ಮ ಹೊಸ ಮನೆಯಲ್ಲಿ ದೆವ್ವ ಕಾಡುತ್ತಿದೆ ಎಂದು ಭಯಭೀತರಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ಖಾಲಿ ಕೋಣೆಯಿಂದ “ಹಲೋ” ಎಂದು ಕರೆಯುವ ಮಗುವಿನ ಧ್ವನಿಯನ್ನು ಆಕೆ ಆಲಿಸಿದಳು. ಮೊದಲಿಗೆ ಇದು ಭ್ರಮೆ ಎಂದು ಅವಳು ಭಾವಿಸಿದ್ದಳು, ಆದರೆ ಒಂದು ಘಟನೆ ಅವಳ ಆತಂಕವನ್ನು ಹೆಚ್ಚಿಸಿತು.
ಮಗು ನಗುವುದನ್ನು ಕೇಳಿದೆ, ಎಷ್ಟು ಮಕ್ಕಳಿದ್ದಾರೆ ಎಂದು ಗಾರ್ಡನ್ ಕೆಲಸಗಾರ ಈಕೆಯನ್ನು ಪ್ರಶ್ನೆ ಮಾಡಿದ್ದ, ಇದಾದ ನಂತರ ಭಯಭೀತಳಾಗಿದ್ದಳು.