
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆಂದು ಈ ಗಗನನೌಕೆ ಪ್ರಯಾಣ ಬೆಳೆಸಿದೆ ಎಂದು ನಾಸಾ ತಿಳಿಸಿದೆ. ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು ನಾಸಾ, “ಸ್ಪೇಸ್‌ಎಕ್ಸ್ ಕಾರ್ಗೋ ಡ್ರಾಗನ್ ದಿನದ ವೇಳೆಯೇ ಗಗನಕ್ಕೆ ಹಾರಿದ್ದು, ಬಾಹ್ಯಾಕಾಶ ಕೇಂದ್ರದಲ್ಲಿ ಡಾಕಿಂಗ್ ಆಗಲು ಹೊರಟಿದೆ” ಎಂದು ತಿಳಿಸಿದೆ.
ವೈಜ್ಞಾನಿಕ ಪ್ರಯೋಗದ ಉಪಕರಣಗಳು, ನಿಂಬೆಹಣ್ಣು, ಈರುಳ್ಳಿ, ಅವೋಕ್ಯಾಡೋಗಳು, ಚೆರ‍್ರಿ ಟೊಮ್ಯಾಟೋಗಳು ಹಾಗೂ ಇತರೆ ಸರಕು ಸೇರಿಕೊಂಡು ಒಟ್ಟಾರೆ 7,300 ಪೌಂಡ್ (3300 ಕಿಲೋಗ್ರಾಂ) ಪೇಲೋಡ್ ಅನ್ನು ಸ್ಪೇಸ್‌ಎಕ್ಸ್ ಗಗನನೌಕೆ ಹೊತ್ತೊಯ್ಯುತ್ತಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸದ್ಯ ಏಳು ಗಗನಯಾನಿಗಳು ಇದ್ದಾರೆ.