ವಾಷಿಂಗ್ಟನ್: ವಾಯುವ್ಯ ವಾಷಿಂಗ್ಟನ್‌ನ ಮೌಂಟ್ ಬೇಕರ್‌ನಲ್ಲಿ ಆಳವಾದ ಹಿಮದ ಅಡಿಯಲ್ಲಿ ಸಮಾಧಿಯಾದ ವ್ಯಕ್ತಿಯನ್ನು ಸ್ಕೀಯರ್ ಒಬ್ಬರು ರಕ್ಷಿಸುವ ಮೈ ಝುಂ ಎನ್ನುವ ವಿಡಿಯೋ ವೈರಲ್ ಆಗಿದೆ. ಹಿಮದಲ್ಲಿ ಬುಡದಲ್ಲಿ ಹೂತುಹೋದ ವ್ಯಕ್ತಿಯ ಶ್ರಮದಾಯಕ ರಕ್ಷಣೆಯನ್ನು ವಿಡಿಯೋದಲ್ಲಿ ನೋಡಬಹುದು.
ಫ್ರಾನ್ಸಿಸ್ ಜುಬರ್ ಎಂಬ ಸ್ಕೀಯರ್ ಹಿಮದ ದಟ್ಟವಾದ ಹೊದಿಕೆಗಳ ಮೂಲಕ ಸ್ನೋಬೋರ್ಡಿಂಗ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ನೋಬೋರ್ಡ್ ಕೆಳಗೆ ಅಂಟಿಕೊಂಡಾಗ ಅಲ್ಲಿ ಒಬ್ಬ ವ್ಯಕ್ತಿಯು ಹಿಮದ ಕೆಳಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿಯುತ್ತದೆ.
ನಂತರ ಸ್ವಲ್ಪ ಸಮಯದ ನಂತರ, ಒಬ್ಬ ವ್ಯಕ್ತಿಯ ಕೈಯನ್ನು ಈತ ನೋಡಿದ್ದಾನೆ. ನಂತರ ಅವನು ಚೆನ್ನಾಗಿದ್ದೀಯಾ ಮತ್ತು ನನ್ನ ದನಿ ಕೇಳುತ್ತದೆಯೇ ಎಂದು ಪ್ರಶ್ನಿಸುತ್ತಾನೆ. ಆ ವ್ಯಕ್ತಿ ಕೈ ಅಲ್ಲಾಡಿಸಿದಾಗ ತಾವು ರಕ್ಷಣೆ ಮಾಡುವ ಭರವಸೆ ನೀಡುವ ಸ್ಕೀಯರ್, ಅಂತಿಮವಾಗಿ ಮನುಷ್ಯನನ್ನು ಹೊರಕ್ಕೆ ತೆಗೆಯಲು ಸಾಹಸಪಟ್ಟು ಯಶಸ್ವಿಯಾಗುತ್ತಾನೆ.
ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ಮಾಡಿದ್ದು ಸ್ಕೀಯರ್ ಅನ್ನು ಹೀರೋ ಎಂದು ಕರೆದಿದ್ದಾರೆ.