ಬೇಸಿಗೆ ಹತ್ತಿರವಾಗುತ್ತಿದ್ದು ಎಲ್ಲೆಲ್ಲೂ ಕಾವು ಹೆಚ್ಚುತ್ತಿರುವ ಕಾರಣ ಹಾವುಗಳು ಬಿಲಗಳಿಂದ ಹೊರಬಂದು ಮನೆಗಳು ಅಥವಾ ವಾಹನಗಳ ಸಂದಿಗಳಲ್ಲಿ ಹೊಕ್ಕಿಕೊಳ್ಳುವುದು, ಅವುಗಳನ್ನು ಕಂಡಾಗ ಜನ ಬೆಚ್ಚಿ ಬೀಳುವುದು ಅಲ್ಲಲ್ಲಿ ಕೇಳಿ ಬರುತ್ತಲೇ ಇರುತ್ತವೆ.
ನಿರೀಕ್ಷಿಸಲೂ ಸಾಧ್ಯವಿಲ್ಲದಂಥ ಜಾಗಗಳಲ್ಲೆಲ್ಲಾ ಹಾವುಗಳು ಬಂದು ಅಡಗಿ ಕುಳಿತಿರುವ ವಿಚಾರವೂ ಸಹ ಆಗಾಗ ಕೇಳಿರುವಂಥದ್ದೇ ಆಗಿದೆ.
ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜರುಗಿದೆ. ಹೆದ್ದಾರಿಯೊಂದರಲ್ಲಿ ಚಾಲನೆಯಲ್ಲಿದ್ದ ಕಾರೊಂದರಲ್ಲಿ ನಾಗರ ಹಾವೊಂದು ಪತ್ತೆಯಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಪ್ರಾಣಿ ರಕ್ಷಣಾ ಪಡೆಯ ಸಿಬ್ಬಂದಿಯೊಬ್ಬರು ಈ ಹಾವನ್ನು ರಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಹಳ ನಾಜೂಕಾಗಿ ಹಾವನ್ನು ಕಾರಿನಿಂದ ಹೊರಗೆ ತೆಗೆಯುವ ಈತ ಅದನ್ನು ಅಲ್ಲೇ ಹತ್ತಿರದ ಬಯಲಲ್ಲಿ ಬಿಡುತ್ತಾರೆ.