alex Certify ಜೀವ ಉಳಿಯಲು ಕಾರಣವಾಯ್ತು ಕೊನೆ ಕ್ಷಣದಲ್ಲಿ ಯುವತಿ ಕೈಗೊಂಡ ಆ ನಿರ್ಧಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವ ಉಳಿಯಲು ಕಾರಣವಾಯ್ತು ಕೊನೆ ಕ್ಷಣದಲ್ಲಿ ಯುವತಿ ಕೈಗೊಂಡ ಆ ನಿರ್ಧಾರ….!

ಪ್ರಾಣವನ್ನು ಪಣಕ್ಕಿಟ್ಟು ಸಾಹಸಮಯ ಕಾರ್ಯಗಳನ್ನು ಮಾಡುವವರು ಅನೇಕ ಮಂದಿ ಇದ್ದಾರೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಸ್ವಲ್ಪದರಲ್ಲಿಯೇ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದರ ವಿಡಿಯೋ ವೈರಲ್​ ಆಗಿದೆ.

ಇಂಟರ್ನ್ಯಾಷನಲ್ ಶಾರ್ಕ್ ಅಟ್ಯಾಕ್ ಫೈಲ್ (ISAF) ವರದಿಯ ಪ್ರಕಾರ, 1958 ಮತ್ತು 2016 ರ ನಡುವೆ ಪ್ರಪಂಚದಾದ್ಯಂತ 2,785 ಅಪ್ರಚೋದಿತ ಶಾರ್ಕ್ ದಾಳಿಗಳು ನಡೆದಿವೆ, ಅದರಲ್ಲಿ 439 ಮೃತಪಟ್ಟಿದ್ದಾರೆ. ಹೀಗಿದ್ದರೂ ಕೂಡ ಯುವತಿಯೊಬ್ಬಳು ಸ್ಕೂಬಾ ಡೈವಿಂಗ್​ ಸಾಹಸದಲ್ಲಿ ತೊಡಗಿ ಇನ್ನೊಂದು ಬಲಿಗೆ ಸಿದ್ಧಳಾಗಿದ್ದಳು !

ವೈರಲ್​ ಆಗಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸ್ಕೂಬಾ ಡೈವ್​ಗೆ ಸಕಲ ಸಿದ್ಧತೆ ನಡೆಸಿದ್ದಳು. ಇನ್ನೇನು ಆಕೆ ಧುಮುಕಬೇಕಿತ್ತು. ಅಷ್ಟರಲ್ಲಿಯೇ ಅದೇನೋ ಅನ್ನಿಸಿ ಒಂದು ಕ್ಷಣ ಆಕೆ ತನ್ನ ನಿರ್ಧಾರ ಹಿಂದಕ್ಕೆ ತೆಗೆದುಕೊಂಡಳು. ಅದ್ಯಾವುದೋ ಶಕ್ತಿಯೇ ಆಕೆಯನ್ನು ತಡೆಯಿತು ಎನ್ನಬಹುದೇನೋ. ಯಾಕೆಂದರೆ ಒಂದು ವೇಳೆ ಆಕೆ ಡೈವಿಂಗ್​ಗೆಂದು ಜಿಗಿದು ಬಿಟ್ಟಿದ್ದರೆ ಭಯಾನಕ ಶಾರ್ಕ್​ ಒಂದರ ದಾಳಿಗೆ ಒಳಗಾಗುವ ಅಪಾಯವಿತ್ತು.

ಯುವತಿ ಜಿಗಿಯುವ ಪ್ರಯತ್ನದಿಂದ ನಿಂತ ಕೆಲ ಕ್ಷಣಗಳಲ್ಲಿಯೇ ದೊಡ್ಡದೊಂದು ಶಾರ್ಕ್ ಅಲ್ಲಿಗೆ ಬಂದಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ತನಗೊಂದು ಆಹಾರ ಸಿಗುತ್ತಿದೆ ಎಂದು ಭಾವಿಸಿಯೇ ಈ ಶಾರ್ಕ್​ ಅಲ್ಲಿಗೆ ಬಂದಿತ್ತೆಂದು ಕಮೆಂಟಿಗರು ಹೇಳುತ್ತಿದ್ದಾರೆ. ಆದರೆ ಸದ್ಯ ಯುವತಿ ಬಚಾವಾಗಿದ್ದಾಳೆ. ಯುವತಿಯನ್ನು ಅಗೋಚರ ಶಕ್ತಿಯೇ ಕಾಪಾಡಿತು ಎಂದು ಕೆಲವರು ಹೇಳುತ್ತಿದ್ದಾರೆ.

https://twitter.com/JimLeitrim2/status/1585404288020496385?ref_src=twsrc%5Etfw%7Ctwcamp%5Etweet

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...