ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ದುಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಬುಧವಾರ ಮುಂಬೈಗೆ ಮರಳಿದ ವೇಳೆ ಏರ್ ಪೋರ್ಟ್ ನಲ್ಲಿ ಗರಂ ಆದರು.
ʼಕಿಸಿ ಕ ಭಾಯಿ ಕಿಸಿ ಕಿ ಜಾನ್ʼ ಚಿತ್ರದ ಕ್ರೇಜ್ ನಲ್ಲಿರುವ ಸಲ್ಮಾನ್ ಖಾನ್ ಅಭಿಮಾನಿಗಳು ಏರ್ ಪೋರ್ಟ್ ನಲ್ಲಿ ನೆಚ್ಚಿನ ನಟನನ್ನು ನೋಡಲು ಜಮಾಯಿಸಿದ್ದರು. ಆದರೆ ಈ ಗದ್ದಲವು ಸಲ್ಮಾನ್‌ಗೆ ಅಸಮಾಧಾನವನ್ನುಂಟು ಮಾಡಿದ್ದು, ಅವರು ಶಾಂತತೆಯನ್ನು ಕಳೆದುಕೊಂಡರು.
ಸಲ್ಮಾನ್ ಜೊತೆಗೆ ಅವರ ಅಂಗರಕ್ಷಕ ಶೇರಾ ಕೂಡ ಇದ್ದರು. ಅಭಿಮಾನಿಗಳು ಸಲ್ಮಾನ್ ಖಾನ್ ಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವಾಗ ಬಾಡಿಗಾರ್ಡ್ ಶೇರಾ ಅವರನ್ನು ಹಿಂದೆ ತಳ್ಳುತ್ತಿದ್ದರು.
ಘಟನೆಯ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಸಲ್ಮಾನ್ ಮುಂಬೈ ವಿಮಾನ ನಿಲ್ದಾಣದ ಆಗಮನದ ಟರ್ಮಿನಲ್‌ನಿಂದ ಹೊರಬರುತ್ತಿದ್ದಾಗ ಅಭಿಮಾನಿಯೊಬ್ಬ ಸಲ್ಲುಗೆ ಕೈಕುಲುಕಲು ಮುಂದಾದ. ಈ ವೇಳೆ ಸುಲ್ತಾನ್ ಹ್ಯಾಂಡ್ ಶೇಕ್ ಮಾಡುವ ಬದಲು ಆತನನ್ನು ಹಿಂದಕ್ಕೆ ಸರಿಯುವಂತೆ ಕೋಪದಿಂದ ಸೂಚಿಸಿದ್ದಾರೆ.
https://youtu.be/yfTFVrg9T04