ಕೇಂದ್ರ ಸರ್ಕಾರದ ಕೃಷಿ ಕಾನೂನನ್ನ ವಿರೋಧಿಸಿ ರೈತರು ಚಳಿ, ಗಾಳಿಗೂ ಹೆದರದೇ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ರೈತರ ಆಹಾರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಬೃಹತ್ ರೊಟ್ಟಿ ತಯಾರಿಸುವ ಯಂತ್ರ ಸ್ಥಾಪಿಸಲಾಗಿದೆ.
ಈ ರೊಟ್ಟಿ ತಯಾರಿಸುವ ಯಂತ್ರವು ಒಂದು ಗಂಟೆಯಲ್ಲಿ 1500ರಿಂದ 2000 ರೊಟ್ಟಿಗಳನ್ನ ತಯಾರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಸಾವಿರಾರು ಜನರಿಗೆ ಏಕಕಾಲದಲ್ಲಿ ಆಹಾರ ವ್ಯವಸ್ಥೆ ಮಾಡಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೊಟ್ಟಿ ತಯಾರಿಸುವ ಯಂತ್ರದ ಫೋಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗಿದೆ.