ಭಾರೀ ಬಿರುಗಾಳಿಯಿಂದ ಬಾಲಿವುಡ್ ಗಾಯಕ ಫರ್ಹಾನ್ ಅಖ್ತರ್ ಪ್ರದರ್ಶನ ನೀಡಬೇಕಾಗಿದ್ದ ಕಾರ್ಯಕ್ರಮದ ವೇದಿಕೆ ಮುರಿದುಬಿದ್ದಿದ್ದು ದೊಡ್ಡ ನಷ್ಟವಾಗಿದೆ.
ಬಾಲಿವುಡ್ ನಟ-ಗಾಯಕ-ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಬುಧವಾರ ಇಂದೋರ್‌ನಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದರು. ಬೃಹತ್ ಬಿರುಗಾಳಿಯು ಸಂಗೀತ ಕಚೇರಿಗೆ ದೊಡ್ಡ ಆಘಾತ ನೀಡಿತು.
ಫರ್ಹಾನ್ ಅವರು ಇಂದೋರ್‌ನ ಬನ್ಸಾಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ (BGI) ಸಂಸ್ಥೆಯ ಮೆಗಾ ವಾರ್ಷಿಕ ಉತ್ಸವದಲ್ಲಿ ಪ್ರದರ್ಶನ ನೀಡಲು ಬಂದಿದ್ದರು.
ಆದರೆ ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ವೇದಿಕೆಯನ್ನು ನೆಲಕ್ಕುರುಳಿಸಿತು. ಲೈಟಿಂಗ್ಸ್ ಗಳೆಲ್ಲವೂ ನೆಲಕ್ಕಪ್ಪಳಿಸಿದವು. ಸ್ಥಳದ ಆಘಾತಕಾರಿ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಬಿರುಗಾಳಿಯಿಂದ ವೇದಿಕೆ ಮತ್ತು ಉಪಕರಣಗಳು ಹಾನಿಗೊಳಗಾಗಿರುವುದನ್ನು ಕಾಣಬಹುದು.
ಲೈಟ್‌ಗಳು ಮತ್ತು ಸೌಂಡ್ ಸಿಸ್ಟಮ್‌ಗಳು ಹಾನಿಗೊಳಗಾಗಿದ್ದು, ಸ್ಥಳದಲ್ಲಿ ಯಾರಿಗೂ ಗಾಯಗಳಾದ ವರದಿಯಾಗಿಲ್ಲ. ಸಂಗೀತ ಕಚೇರಿಯನ್ನು ರದ್ದುಗೊಳಿಸಲಾಗಿದ್ದು, ಇದೀಗ ಏಪ್ರಿಲ್ 7ಕ್ಕೆ ಮರುನಿಗದಿ ಮಾಡಲಾಗಿದೆ.