alex Certify ಘೇಂಡಾಮೃಗಕ್ಕೂ ಫುಟ್​ಬಾಲ್​ ಆಡುವ ಆಸೆ…..? ತಮಾಷೆಯ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಘೇಂಡಾಮೃಗಕ್ಕೂ ಫುಟ್​ಬಾಲ್​ ಆಡುವ ಆಸೆ…..? ತಮಾಷೆಯ ವಿಡಿಯೋ ವೈರಲ್​

ಘೇಂಡಾಮೃಗವೊಂದು ಫುಟ್​ಬಾಲ್​ ಮೈದಾನಕ್ಕೆ ನುಗ್ಗಿ ಆಟವನ್ನೇ ನಿಲ್ಲಿಸಬೇಕಾದ ಘಟನೆ ನಡೆದಿದೆ. ಕುತೂಹಲ ಎಂದರೆ ಇದನ್ನು ಆಟದ ಮೈದಾನದಿಂದ ಹೊರಕ್ಕೆ ಹಾಕಿದರೂ ತಿರುಗಿ ತಿರುಗಿ ಮೈದಾನತ್ತ ಮುಖ ಮಾಡುತ್ತಿದ್ದು, ನೋಡುಗರಿಗೆ ತಮಾಷೆ ಉಂಟುಮಾಡಿದೆ.

ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಇದರ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಬೂದು ಘೇಂಡಾಮೃಗವೊಂದು ಮೈದಾನದಲ್ಲಿ ಅಡ್ಡಾಡುತ್ತಿರುವುದನ್ನು ಮತ್ತು ಹಸಿರು ಹುಲ್ಲನ್ನು ತಿನ್ನುತ್ತಿರುವುದನ್ನು ನೋಡಬಹುದು. ಆದರೆ ಅದು ಆಟದ ಮೈದಾನದೊಳಕ್ಕೆ ನುಗ್ಗಿದೆ. ಅದನ್ನು ಆಟಗಾರರು ಹೊರಕ್ಕೆ ಕಳುಹಿಸಲು ಹರಸಾಹಸ ಪಡುತ್ತಿದ್ದಾರೆ.

ಇದಕ್ಕೆ ತಮಾಷೆಯಾಗಿ ಶೀರ್ಷಿಕೆ ಕೊಟ್ಟಿರುವ ಸುಶಾಂತ ನಂದಾ ಅವರು, “ಆಟಗಾರನನ್ನು ಬದಲಿಸಲು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದಾರೆ” ಎಂದು ಬರೆದಿದ್ದಾರೆ.

18 ಸೆಕೆಂಡುಗಳ ವಿಡಿಯೋವನ್ನು 2 ದಿನಗಳ ಹಿಂದೆ ಶೇರ್​ ಮಾಡಿಕೊಳ್ಳಲಾಗಿದ್ದು, ಇದಾಗಲೇ 3 ಲಕ್ಷಕ್ಕೂ ಹೆಚ್ಚು ಮಂದಿ ಅದನ್ನು ವೀಕ್ಷಿಸಿದ್ದಾರೆ. ಬಹುಶಃ ಇದು ಹೋದ ಜನ್ಮದಲ್ಲಿ ಫುಟ್​ಬಾಲ್​ ಆಟಗಾರ ಆಗಿದ್ದಿರಬಹುದು ಎಂದು ಕೆಲವರು ತಮಾಷೆಯ ಕಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...