ಪುಣೆಯ ಶಾಲೆಯೊಂದರಲ್ಲಿ 1954ರಲ್ಲಿ ಹತ್ತನೇ ತರಗತಿ ತೇರ್ಗಡೆಗೊಂಡವರು ಇತ್ತೀಚೆಗೆ ಒಂದೆಡೆ ಸೇರಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿರಿಯ ಜೀವಿಗಳು ಹೀಗೆ ಒಂದೆಡೆ ’ರೀಯೂನಿಯನ್’ ಆಗಿ ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಭಾರೀ ಲವಲವಿಕೆಯಲ್ಲಿ ಕುಣಿಯುತ್ತಿರುವ ವಿಡಿಯೋ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
ಬಾಲಿವುಡ್‌ನ ಹೆಸರಾಂತ ಪ್ಲೇಬ್ಯಾಕ್ ಸಿಂಗರ್ ಮುಖೇಶ್ ಕುಮಾರ್ ಹಾಡಿರುವ ’ಕಿಸೀ ಕೀ ಮುಸ್ಕುರಾತೋಂ ಪೇ’ ಎಂದು ಬ್ಯಾಗ್ರೌಂಡ್‌ನಲ್ಲಿ ಹಾಡು ಮೂಡಿ ಬರುತ್ತಿದೆ.
“ಆ ದಿನಗಳಲ್ಲಿ ಹತ್ತನೇ ತರಗತಿಯನ್ನು ಎಸ್‌ಎಸ್‌ಸಿ ಎನ್ನುತ್ತಿದ್ದರು ಅಂದುಕೊಳ್ಳುತ್ತೇನೆ. ಈ ಮಂದಿಯ ಜೀವನೋತ್ಸಾಹ ಜೋರಾಗಿದೆ. ಅವರಿಗೆ ಉತ್ತಮ ಆರೋಗ್ಯದೊಂದಿಗೆ ದೇವರು ಹರಸಲಿ,” ಎಂದು ನೆಟ್ಟಿಗರೊಬ್ಬರು ಹಿರಿಯರ ಈ ಲವಲವಿಕೆಯನ್ನು ಕೊಂಡಾಡಿದ್ದಾರೆ.