ತಾಯಿಯನ್ನು ಮಕ್ಕಳು ಅನುಸರಣೆ ಮಾಡುವುದು ಪ್ರಕೃತಿ ಸಹಜ ಬೆಳವಣಿಗೆ. ಇದು ಪ್ರಾಣಿಗಳಿಗೂ ಅನ್ವಯ ಎಂಬುದಕ್ಕೆ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಹಾವು ಕೂಡ ಇದಕ್ಕೆ ಹೊರತಲ್ಲ ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕ್ಲಿಪ್ ಅನ್ನು ಆಶ್ಲೇ ಮ್ಯಾಕ್ಲಾಫ್ಲಿನ್ ಸೆರೆಹಿಡಿದಿದ್ದಾರೆ. ವೈರಲ್ ವಿಡಿಯೋವು ದಕ್ಷಿಣ ಪೆಸಿಫಿಕ್ನಲ್ಲಿ ರ್ಯಾಟಲ್ ಸ್ನೇಕ್ ನೆಲದ ಮೇಲೆ ಚಲಿಸುತ್ತಿರುವುದು ಮತ್ತು ಅದರ ಮರಿ ಹಿಂಬಾಲಿಸುವುದು ಕಾಣಿಸುತ್ತದೆ.
ಸೋ- ಕಾಲ್ ರಾಟಲ್ ಸ್ನೇಕ್ ರಿಮೂವಲ್ ಎಂಬ ಶೀರ್ಷಿಕೆಯಲ್ಲಿ ಫೇಸ್ಬುಕ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಅನೇಕ ಹಾವು ಜಾತಿಗಳು ಹುಟ್ಟಿದ ನಿಮಿಷದಿಂದ ಸ್ವಭಾವತಃ ಸ್ವತಂತ್ರವಾಗಿರುತ್ತವೆ. ಹೆಚ್ಚಿನವು ತಾಯಿಯನ್ನು ಬಿಟ್ಟು ಕಾಡಿನಲ್ಲಿ ಒಂಟಿಯಾಗಿ ಬದುಕುತ್ತವೆ ಎಂಬ ನಂಬಿಕೆ ಇದೆ. ಆದರೂ, ಕಾಳಿಂಗ ಸರ್ಪಗಳು ಇದಕ್ಕೆ ಹೊರತಾಗಿವೆ ಎಂದು ಹೇಳಲಾಗುತ್ತದೆ.
ವರದಿಯ ಪ್ರಕಾರ ಅವು ತಮ್ಮ ಮರಿಗಳಿಗೆ ಶುಶ್ರೂಷೆ ಮಾಡುವುದಿಲ್ಲ. ಆದರೂ ಮರಿಗಳು ತಮ್ಮ ಮೊದಲ ಚರ್ಮವನ್ನು ಹೊರ ಹಾಕುವ ಒಂದು ವಾರದವರೆಗೆ ಅವುಗಳನ್ನು ಕಾಪಾಡಿಕೊಳ್ಳುತ್ತವೆ.
ವಯಸ್ಕ ಹಾವಿನ ಮರಿ ಹಿಂಬಾಲಿಸುವ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ. ಅದನ್ನು ಸೆರೆ ಹಿಡಿದವರ ಪ್ರಕಾರ, ಹಾವುಗಳ ನಡವಳಿಕೆಯು ಅಪರೂಪವಾಗಿತ್ತು ಮತ್ತು ಕಾರಣವನ್ನು ನಿರ್ಧರಿಸಲು ಸಾಕಷ್ಟು ಅಧ್ಯಯನ ಸಂಪನ್ಮೂಲಗಳು ಅಥವಾ ಡೇಟಾ ಇಲ್ಲ ಎಂದು ಹೇಳಿದ್ದಾರೆ.
ಈ ಕ್ಲಿಪ್ ಫೇಸ್ಬುಕ್ನಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ನಾನು ಹಿಂದೆಂದೂ ಅಂತಹದನ್ನು ನೋಡಿಲ್ಲ ಎಂದು ಕೆಲವರು ಅಭಿಪ್ರಾಯ ಬರೆದಿದ್ದಾರೆ.