ಅಬುಧಾಬಿ: ವರ್ಷದ ಕೊನೆಯ ಚಿತ್ರ ಫಾರ್ಮುಲಾ 1 ಚಿತ್ರದ ಜೋಶ್ನಲ್ಲಿದ್ದಾರೆ ನಟ ರಣವೀರ್ ಸಿಂಗ್. ಅಬುಧಾಬಿಗೆ ಈ ಸಂದರ್ಭದಲ್ಲಿ ಭೇಟಿ ನೀಡಿರುವ ಅವರು, ಈ ಚಿತ್ರದ ಗುಂಗಿನಲ್ಲಿ ಇರುವುದು ಅವರ ಬಟ್ಟೆಗಳಿಂದಲೂ ನೋಡಬಹುದಾಗಿದೆ. ಅವರು ವಿಚಿತ್ರ ಬಟ್ಟೆ ಧರಿಸುವ ಫೋಟೋಗಳು ಇದೀಗ ವೈರಲ್ ಆಗಿವೆ.
ಇವರ ಬಟ್ಟೆ ಅಬುಧಾಬಿಯಲ್ಲಿ ಪತ್ರಕರ್ತರನ್ನು ಆಕರ್ಷಿಸಿದ್ದು, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮಾಜಿ ರೇಸಿಂಗ್ ಪಟು ಮತ್ತು ಪತ್ರಕರ್ತ ಮಾರ್ಟಿನ್ ಬ್ರಂಡಲ್ ಅವರು ರಣವೀರ್ ಸಿಂಗ್ ಅವರನ್ನು ಈ ವೇಷದಲ್ಲಿ ಗುರುತು ಹಿಡಿಯುವುದು ಕಷ್ಟವಾಯಿತೆಂದು ಹೇಳಿದ್ದಾರೆ. ಆದರೆ ನಿಮ್ಮ ಮುಖ ನಟನನ್ನು ಹೋಲುತ್ತದೆ ಎಂದು ತಾನು ಹೇಳಿರುವುದಾಗಿ ಪತ್ರಕರ್ತ ಹೇಳಿದ್ದಾರೆ.
ನಂತರ ರಣವೀರ್ ಅವರ ಬಳಿ ಹೋದ ಪತ್ರಕರ್ತ ನಿಮ್ಮ ಪರಿಚಯ ಮಾಡಿಕೊಳ್ಳಿ ಎಂದಾಗ, ರಣವೀರ್ ಸಿಂಗ್, “ನಾನು ಬಾಲಿವುಡ್ ನಟ ಮತ್ತು ನಾನು ಭಾರತದ ಮುಂಬೈನಿಂದ ಬಂದಿದ್ದೇನೆ. ನಾನು ಮನರಂಜನೆಗಾರ” ಎಂದು ಹೇಳಿದಾಗ ಪತ್ರಕರ್ತ ವಿಸ್ಮಯಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾರ್ಟಿನ್ ಬ್ರಂಡಲ್, ರಣವೀರ್ ಸಿಂಗ್ ಅವರ ಉಡುಪಿನ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ನಡುವಿನ ಸಂಭಾಷಣೆ ಇದೀಗ ವೈರಲ್ ಆಗಿದೆ. ರಣವೀರ್ನ ಉಡುಪಿನ ಬಗ್ಗೆ ನೆಟ್ಟಿಗರಿಂದ ಥಹರೇವಾರಿ ಕಮೆಂಟ್ಗಳು ಬರುತ್ತಿವೆ.