
ಸುಮಾರು 20 ವರ್ಷಗಳಿಂದ ಹಾವು ಹಿಡಿಯುತ್ತಿದ್ದ ರಾಜಸ್ಥಾನದ ಚುರು ಜಿಲ್ಲೆಯವರಾದ ವಿನೋದ್ ತಿವಾರಿ ವಿಪರ್ಯಾಸ ಎನಿಸಿದರೂ, ವಿಷಪೂರಿತ ನಾಗರಹಾವು ಕಚ್ಚಿ ಮೃತಪಟ್ಟಿದ್ದಾರೆ.
ಆತನ ವಯಸ್ಸು 45. ಸ್ಥಳಿಯರ ಪ್ರಕಾರ ಆತ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರು. ಚುರುವಿನ ಗೊಗಮೇಡಿ ಪ್ರದೇಶದಲ್ಲಿ ಅಂಗಡಿಯೊಂದರ ಹೊರಗೆ ನಾಗರ ಹಾವು ಹಿಡಿಯಲು ಯತ್ನಿಸುತ್ತಿದ್ದಾಗ ಮೃತಪಟ್ಟ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಾವು ಹಿಡಿಯಲು ಬಂದ ವಿನೋದ್ ತಿವಾರಿ ನಾಗರಹಾವನ್ನು ಚೀಲದಲ್ಲಿ ಹಾಕಿಕೊಂಡ ತಕ್ಷಣ ಹಾವು ವಿನೋದ್ ಗೆ ಕಚ್ಚಿದೆ. ವಿನೋದ್ ಕೆಲವೇ ನಿಮಿಷಗಳಲ್ಲಿ ನಿಧನರಾದರು,