ಪ್ರವಾಹದ ವಿರುದ್ಧ ಈಜುವುದರ ಕುರಿತು ಅನೇಕ ನಾಣ್ಣುಡಿ ಇದೆ. ಅಂದರೆ ಎಂತಹ ಸಾಹಸಿಗನಾದರೂ ಪ್ರವಾಹದ ವಿರುದ್ಧ ಈಜುವುದು ಅಷ್ಟು ಸಲೀಸಲ್ಲದ ಕೆಲಸ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನುರಿತ ವೃತ್ತಿಪರ ಈಜುಗಾರರೂ ಸಹ ಪ್ರವಾಹದ ವಿರುದ್ಧ ಈಜುವುದು ಕಷ್ಟ ಎಂದು ತಿಳಿಸಿಕೊಡುವ ವಿಡಿಯೋ ವೈರಲ್ ಆಗಿದೆ.
ಇಂಟರೆಸ್ಟಿಂಗ್ಎಸ್ಎಫ್ ಹೆಸರಿನ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮೂವರು ವೃತ್ತಿಪರ ಈಜುಗಾರರು ಸವಾಲನ್ನು ಸ್ವೀಕರಿಸಿ, ನೀರಿನ ಪ್ರವಾಹದ ವಿರುದ್ಧ ಈಜಲು ಹೆಣಗಾಡುತ್ತಾರೆ.
ಈಜುಕೊಳದಲ್ಲಿ ಕೃತಕವಾಗಿ ನಿರ್ಮಿಸಿದ ರಭಸವಾಗಿ ನೀರು ಹರಿಯುವಂತಿರುವ ವ್ಯವಸ್ಥೆಯಲ್ಲಿ ನೀರಿನ ವೇಗವನ್ನು ಗಂಟೆಗೆ 24.3 ಕಿಮೀಗೆ ಹೊಂದಿಸಲಾಗಿದ್ದು, ಅಲ್ಲಿ ಒಬ್ಬರಾದ ಮೇಲೆ ಒಬ್ಬರು ಈಜಲು ಅವಕಾಶವನ್ನು ಪಡೆಯುತ್ತಾರೆ. ವಿಡಿಯೊವನ್ನು ಮೂಲತಃ ರೆಡ್ಡಿಟ್ನಲ್ಲಿ ಎರಡು ವರ್ಷಗಳ ಹಿಂದೆ ಅಪ್ಲೋಡ್ ಮಾಡಲಾಗಿತ್ತು ಈಗ ಅದು ಮತ್ತೆ ಕಾಣಿಸಿಕೊಂಡಿದೆ.
ಅಪ್ಲೋಡ್ ಮಾಡಿದ ನಂತರ ಈ ವಿಡಿಯೊ 9.3 ಮಿಲಿಯನ್ ವೀಕ್ಷಣೆ ಗಳಿಸಿದೆ. “ಈಜುಗಾರರು ರಭಸವಾದ ನದಿಗೆ ಹೋಗದಿರಲು ಇದೂ ಒಂದು ಕಾರಣ. ಒಂದು ನಿರ್ದಿಷ್ಟ ಹಂತವನ್ನು ಮೀರಿ ಈಜುಗಾರರ ಶಕ್ತಿ ಮತ್ತು ಅಸಮರ್ಥತೆಯನ್ನು ನೋಡಿ……” ಎಂಬ ಕೆಲವು ಪ್ರತಿಕ್ರಿಯೆಗಳು ಬಂದಿವೆ.
ಒಬ್ಬ ಮಹಿಳೆ ಸೇರಿದಂತೆ ಮೂವರು ರಭಸವಾಗಿ ಬರುವ ನೀರಿಗೆ ಎದುರಾಗಿ ಈಜಲು ಪ್ರಯತ್ನ ಮಾಡುತ್ತಾರೆ. ಹತ್ತಕ್ಕಿಂತ ಹೆಚ್ಚು ಸೆಕೆಂಡ್ ಅವರು ಈಜಲು ಸಾಧ್ಯವಾಗುವುದೇ ಇಲ್ಲ.
https://twitter.com/rosenharleen/status/1559045289679495171?ref_src=twsrc%5Etfw%7Ctwcamp%5Etweetembed%7Ctwterm%5E1559045289679495171%7Ctwgr%5E5afb9efcb904d981b13e2c873296b7d5adeb3610%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-professional-swimmers-struggle-to-swim-against-water-current-in-this-viral-video-5754889.html