![](https://kannadadunia.com/wp-content/uploads/2022/01/naremdra-modi.png)
ಮಣಿಪುರ ರಾಜಧಾನಿ ಇಂಫಾಲಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿನ ಸಾಂಪ್ರದಾಯಿಕ ವಾದ್ಯೋಪಕರಣಗಳನ್ನು ನುಡಿಸಲು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಂಫಾಲಕ್ಕೆ ವಿಮಾನದಲ್ಲಿ ಬಂದಿಳಿದ ಪ್ರಧಾನಿಗೆ ಜಾನಪದ ಕಲಾವಿದರು ಸ್ವಾಗತ ಕೋರಿದರು. ಇದೇ ವೇಳೆ, ವಾದ್ಯ ನುಡಿಸುತ್ತಿದ್ದ ಕಲಾವಿದರೊಬ್ಬರ ಬಳಿ ತೆರಳಿದ ಮೋದಿ, ತಾವೂ ಸಹ ತಮಟೆ ಬಡಿದು ಆನಂದಿಸಿದರು.
ʼಓವರ್ ಟೇಕ್ʼ ಮಾಡುವ ಮುನ್ನ ವಾಹನ ಸವಾರರಿಗೆ ತಿಳಿದಿರಲಿ ಈ ಅಮೂಲ್ಯ ಮಾಹಿತಿ
ಇದೇ ದಿನದಂದು, ಈಶಾನ್ಯದ ರಾಜ್ಯದಲ್ಲಿ 1,850 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 13 ಯೋಜನೆಗಳು ಚಾಲನೆ ನೀಡಿದ್ದಾರೆ. ಇದೇ ವೇಳೆ, 2,950 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.