ಪೈಲಟ್ ಒಬ್ಬರ ಕಾವ್ಯಾತ್ಮಕ ಪ್ರಕಟಣೆ ಕೆಲ ದಿನಗಳ ಹಿಂದೆ ಭಾರಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಇದೀಗ ಸ್ಪೈಸ್ ಜೆಟ್ ಪೈಲಟ್‌ನ ಕಾವ್ಯಾತ್ಮಕ ಪ್ರಕಟಣೆಯೂ ವೈರಲ್ ಆಗುತ್ತಿದೆ. ಪೈಲಟ್ ಮೋಹಿತ್ ತಿಯೋಟಿಯಾ ಅವರ ಸಾಹಿತ್ಯಿಕ ಕೌಶಲ್ಯಕ್ಕಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ತಾಯಿ, ಒಂದು ವರ್ಷದ ಮಗ ಮತ್ತು ತಾವು ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಪೈಲಟ್ ಕಾವ್ಯಾತ್ಮಕ ಘೋಷಣೆ ಮಾಡಿರುವುದಾಗಿ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
‘ವಿಮಾನದಲ್ಲಿ ಇಬ್ಬರು ವಿಶೇಷ ವ್ಯಕ್ತಿಗಳಿದ್ದಾರೆ. ಒಬ್ಬರು, ನನ್ನ ಡಯಾಪರ್ ಅನ್ನು ಬದಲಾಯಿಸಿದವರು ಮತ್ತು ಎರಡನೆಯವರು ನಾನು ಡಯಾಪರ್ ಅನ್ನು ಬದಲಾಯಿಸುವಂತೆ ಮಾಡಿದವರು’ ಎಂದು ಹೇಳಿದರು.
“ಆಕಾಶವು ಮೇಲೆ ಸುಂದರವಾಗಿದೆ. ನಿಮ್ಮ ಕುಟುಂಬದ ಜೊತೆ ಹೋಗುವುದು ಬಹಳ ಸಂತೋಷ ಕೊಡುತ್ತದೆ. ತುರ್ತು ಪರಿಸ್ಥಿತಿ ಬಂದರೆ ದಯವಿಟ್ಟು ಹೆಂಡತಿಯನ್ನು ನೋಡಿಕೊಳ್ಳಿ” ಎಂದು ಪೈಲಟ್ ಪ್ರಯಾಣಿಕರನ್ನು ಕಾವ್ಯಾತ್ಮಕವಾಗಿ ಹುರಿದುಂಬಿಸುವುದನ್ನು ಕೇಳಬಹುದು.