ನ್ಯೂಜೆರ್ಸಿಯ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ರೆಫ್ರಿಜರೇಟರ್‌ನ ಹಿಂದೆ ಅಡಗಿಕೊಂಡಿದ್ದ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ತಕ್ಷಣವೇ ಹಾವನ್ನು ರಕ್ಷಿಸುವವರನ್ನು ಕರೆದು ಹಾವನ್ನು ಹಿಡಿಸಿದ್ದಾರೆ.
ಅವರು ಹಾವನ್ನು ಲಿಬರ್ಟಿ ಹ್ಯೂಮನ್ ಸೊಸೈಟಿ ಎಂಬ ಪ್ರಾಣಿಗಳ ಆಶ್ರಯಕ್ಕೆ ಕೊಂಡೊಯ್ದಿದ್ದಾರೆ. ಅದು ಪೈಬಾಲ್ಡ್ ಬಾಲ್ ಹೆಬ್ಬಾವು ಎಂದು ಗುರುತಿಸಲಾಗಿದೆ. ಪೈಡ್ ಬಾಲ್ ಹೆಬ್ಬಾವುಗಳು ಎಂದೂ ಅದನ್ನು ಕರೆಯುತ್ತಾರೆ, ಇವುಗಳ ಕಂದು ಅಥವಾ ಕಿತ್ತಳೆ ಬಣ್ಣ ಹೊಂದಿರುತ್ತವೆ.
ಈ ಹಾವು ನ್ಯೂಪೋರ್ಟ್ ಜಿಲ್ಲೆಯ ಅಪಾರ್ಟ್‌ಮೆಂಟ್‌ನ 29 ನೇ ಮಹಡಿಯಲ್ಲಿ ಪತ್ತೆಯಾಗಿದೆ. ಕುತೂಹಲಕಾರಿಯಾಗಿ, ಬಾಲ್ ಹೆಬ್ಬಾವು ಅಮೆರಿಕಾದಲ್ಲಿ ಸಾಕುಪ್ರಾಣಿಗಳಾಗಿ ಇರಿಸಲಾಗಿರುವ ಅತ್ಯಂತ ಜನಪ್ರಿಯ ಸರೀಸೃಪಗಳಲ್ಲಿ ಒಂದಾಗಿದೆ ಮತ್ತು ಪೈಬಾಲ್ಡ್ ಮಾರ್ಫ್ ಅತ್ಯಂತ ಅಮೂಲ್ಯವಾದ ಪ್ರಭೇದಗಳಲ್ಲಿ ಒಂದಾಗಿದೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ, ಲಿಬರ್ಟಿ ಹ್ಯೂಮನ್ ಸೊಸೈಟಿಯು ಹಾವಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ಇಂಥ ಹಲವು ಘಟನೆಗಳು ಇದಾಗಲೇ ನಡೆದಿವೆ. ಅಡುಗೆ ಮನೆ, ಫ್ರಿಡ್ಜ್, ವಾಹನಗಳಲ್ಲಿ ನಾಗರಹಾವು, ಹೆಬ್ಬಾವುಗಳು ಪತ್ತೆಯಾಗಿವೆ. ಬೇಸಿಗೆ ಹಿನ್ನೆಲೆಯಲ್ಲಿ ತಂಪು ಪ್ರದೇಶ ಅರಸಿ ಅವುಗಳು ಬರುತ್ತವೆ.
https://www.youtube.com/watch?v=aq4YvfRR6WU