alex Certify Watch Video | ಕೇವಲ 1 ರೂಪಾಯಿಗೆ ಪ್ಲೇಟ್ ಬಿರಿಯಾನಿ;‌ ತಿನ್ನಲು ಮುಗಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಕೇವಲ 1 ರೂಪಾಯಿಗೆ ಪ್ಲೇಟ್ ಬಿರಿಯಾನಿ;‌ ತಿನ್ನಲು ಮುಗಿಬಿದ್ದ ಜನ

ಉಪ ಖಂಡದ ಯಾವುದೇ ಪ್ರದೇಶವಾದರೂ ಬಿರಿಯಾನಿಗೆ ಇರುವ ಬೇಡಿಕೆ ಮಾತ್ರ ಒಂದೇ ಮಟ್ಟದಲ್ಲಿರುತ್ತದೆ. ಬಹುತೇಕ ದೇಶದ ಎಲ್ಲ ಊರುಗಳಲ್ಲೂ ಬಿರಿಯಾನಿ ಉಣಬಡಿಸುತ್ತಲೇ ಅನೇಕ ರೆಸ್ಟೋರೆಂಟ್‌ಗಳು ಭಾರೀ ಜನಪ್ರಿಯತೆ ಗಿಟ್ಟಿಸಿವೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ’ದಿ ಎಂಪೈರ್‌ ಹೋಟೆಲ್’ ತನ್ನ ಪ್ರಾರಂಭೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬರೀ ಒಂದು ರೂಪಾಯಿಗೆ ಬಿರಿಯಾನಿ ಕೊಡುವುದಾಗಿ ಘೋಷಿಸಿದೆ.

ಒಂದು ರೂಪಾಯಿಗೆ ಒಂದು ಬಿರಿಯಾನಿಯನ್ನು ಒಬ್ಬರಿಗೆ ಕೊಡುವುದಾಗಿ ಹೇಳಿದ ಬೆನ್ನಿಗೇ ಈ ರೆಸ್ಟೋರೆಂಟ್‌ ಸುತ್ತ ಭಾರೀ ಸಂಖ್ಯೆಯಲ್ಲಿ ಜನ ನೆರೆದ ಪರಿಣಾಮ ಒಳಗೆ ಬರಲು ಸಿಕ್ಕಾಪಟ್ಟೆ ನೂಕು ನುಗ್ಗಲು ಸಂಭವಿಸಿದೆ. ಇದನ್ನು ತಪ್ಪಿಸಲು ಕೆಲ ಕಾಲ ಹೋಟೆಲ್‌ಅನ್ನು ಮುಚ್ಚಿಸಬೇಕಾಗಿ ಬಂದಿದೆ. ಈ ಘಟನೆ ಜೂನ್ 16ರಂದು ಸಂಭವಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...