ಏಪ್ರಿಲ್ 17 ರಂದು ಕೀರ್ತಿದನ್ ಗಧ್ವಿ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್‌ನ ಪಟಾನ್ ಜಿಲ್ಲೆಯ ನಿವಾಸಿಗಳು ಟಿಕೆಟ್ ಪಡೆಯುವ ಬದಲು ರೋಟಿಗಳೊಂದಿಗೆ ಆಗಮಿಸಿದ ಘಟನೆ ನಡೆದಿದೆ.
ಕಾರ್ಯಕ್ರಮದ ಸಂಘಟಕರು ಹಸಿದ ಜಾನುವಾರುಗಳಿಗೆ ಆಹಾರ ನೀಡುವ ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲು ರೋಟಿಯೊಂದಿಗೆ ಬರಲು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಅನನ್ಯ ಮತ್ತು ಹೃದಯಸ್ಪರ್ಶಿ ರೀತಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಗಾಯಕ ಪ್ರದರ್ಶನ ಮಾಡುವಾಗ ವೇದಿಕೆಯಲ್ಲಿ ಚಪಾತಿ, ರೋಟಿ ರಾಶಿಯನ್ನು ವಿಡಿಯೋದಲ್ಲಿ ನೋಡಬಹುದು. ಇದು ನೆಟ್ಟಿಗರ ಮನಸ್ಸು ಗೆದ್ದಿದೆ. ಈ ರೀತಿ ಕಾರ್ಯಕ್ರಮ ಹೆಚ್ಚೆಚ್ಚು ನಡೆಯುವ ಅಗತ್ಯ ಇದೆ ಎನ್ನುತ್ತಿದ್ದಾರೆ.