“ನವಿಲು ಗರಿಗಳನ್ನು ಹಾಕುವುದರಿಂದ ನವಿಲು ಆಗುವುದಿಲ್ಲ” ಎಂಬ ಈಸೋಪನ ನೀತಿಕಥೆಗಳ ಪ್ರಸಿದ್ಧ ಗಾದೆಯನ್ನು ನೀವು ಕೇಳಿರಬೇಕು. “ನೀವೇ ಏನೋ ಅದನ್ನೇ ಆಗಿರಿ” ಎಂದು ಜನರಿಗೆ ಸಲಹೆ ನೀಡಲಾಗುತ್ತದೆ. ಆದರೆ ಎಷ್ಟೋ ಮಂದಿಗೆ ಬೇರೆಯವರು ಏನು ಆಗಿದ್ದಾರೋ ಹಾಗೆ ಆಗುವ ಹಂಬಲ.
ಇದು ಜನರ ಮಾತಾದರೆ ಗಿಳಿ ಕೂಡ ಹಾಗೆಯೇ ಆಗಿಬಿಟ್ಟಿದೆ. ಕಾಗದದ ಕಟೌಟ್‌ಗಳನ್ನು ಬಳಸಿ ತನ್ನ ಬಾಲವನ್ನು ಅಲಂಕರಿಸಿ ನವಿಲಿನಂತೆ ಕಾಣಿಸಲು ಪ್ರಯತ್ನಿಸುತ್ತಿರುವ ಅಚ್ಚರಿ ವಿಡಿಯೋ ಇದಾಗಿದೆ. ಹಸಿರು ಗಿಳಿಯು ಕಾಗದದ ಕಟ್-ಔಟ್‌ಗಳ ತೆಳುವಾದ ಪಟ್ಟಿಗಳನ್ನು ಕಿತ್ತು ತನ್ನ ಗರಿಗಳಿಗೆ ಜೋಡಿಸುವ ಕುತೂಹಲದ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.
ಮೇಜಿನ ಮೇಲೆ ಕೂತಿರುವ ಹಕ್ಕಿ, ಮೇಜಿನ ಮೇಲೆಯೇ ಇಟ್ಟಿರುವ ಕಾಗದವನ್ನು ಮೆಲ್ಲಗೆ ಮುರಿಯುತ್ತಾ ವಿಲಕ್ಷಣ ಕಾರ್ಯದಲ್ಲಿ ಮಗ್ನವಾಗಿದೆ. ತನ್ನ ಚಿಕ್ಕ ಬಾಲಕ್ಕೆ ಪೇಪರ್ ಕಟ್ ಔಟ್ ಗಳನ್ನು ಸೇರಿಸಿ ತನ್ನನ್ನು ನವಿಲಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ. ಈ ಕುತೂಹಲದ ವಿಡಿಯೋ ಕಂಡರೆ ನೀವೂ ಅಚ್ಚರಿಗೊಳ್ಳುವುದು ಖಂಡಿತ.