ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೇರೆ ಮೇರಿದೆ. ವಿದೇಶಗಳಲ್ಲೂ ಸಹ ಭಾರತದ ಈ ಸಂಭ್ರಮಕ್ಕೆ ಬೆಂಬಲವಾಗಿ ಕಾರ್ಯಕ್ರಮ ನಡೆದು ಆ ಮೂಲಕ ಶುಭ ಹಾರೈಕೆ ಸಲ್ಲಿಕೆಯಾಗಿದೆ.
ನೆರೆಯ ಪಾಕಿಸ್ತಾನದಲ್ಲೂ ಕೂಡ ಇಂತದ್ದೊಂದು ಪ್ರಸಂಗ ನಡೆದಿದೆ. ಭಾರತದ ಜನತೆಗೆ ಶುಭ ಹಾರೈಸಲು ಪಾಕಿಸ್ತಾನಿ ಕಲಾವಿದರೊಬ್ಬರು ವಿಶಿಷ್ಟ ಪ್ರಯತ್ನ ಮಾಡಿದ ವಿಡಿಯೊ ವೈರಲ್ ಆಗಿದೆ.
ಪಾಕಿಸ್ತಾನದ ರಬಾಬ್ ಪ್ಲೇಯರ್ ಸಿಯಾಲ್ ಖಾನ್ ಭಾರತದ ರಾಷ್ಟ್ರಗೀತೆ ಜನ ಗಣಮನವನ್ನು ನುಡಿಸುವ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಭಾರತದ ಜನರಿಗೆ ಸಿಯಾಲ್ ಅವರ ವಿಶೇಷ ಗೌರವದ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ರಾಷ್ಟ್ರಗೀತೆಯ ನಿರೂಪಣೆಯನ್ನು ಸಹ ಇಷ್ಟಪಟ್ಟಿದ್ದಾರೆ.
ಟ್ವಿಟ್ಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಅವರು “ಗಡಿಯಲ್ಲಿರುವ ನನ್ನ ಕೇಳುಗರಿಗೆ ಇಲ್ಲಿದೆ ಉಡುಗೊರೆ” ಎಂದು ಪೋಸ್ಟ್ ಮಾಡಿದ್ದಾರೆ.
ಹ್ಯಾಪಿ ಇಂಡಿಪೆಂಡೆನ್ಸ್ ಡೇ ಇಂಡಿಯಾ. ನಮ್ಮ ನಡುವಿನ ಶಾಂತಿ, ಸಹಿಷ್ಣುತೆ ಮತ್ತು ಉತ್ತಮ ಸಂಬಂಧಗಳಿಗಾಗಿ ಸ್ನೇಹ ಮತ್ತು ಸೌಹಾರ್ದತೆಯ ಸಂಕೇತವಾಗಿ ಭಾರತದ ರಾಷ್ಟ್ರಗೀತೆಯನ್ನು ಪ್ರಯತ್ನಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ 1 ಮಿಲಿಯನ್ ವೀಕ್ಷಣೆಯಾಗಿದ್ದು, 56 ಸಾವಿರ ಲೈಕ್ ಗಳಿಸಿದೆ. ರಬಾಬ್ ವೀಣೆಯಂತೆಯೇ ತಂತಿ ವಾದ್ಯವಾಗಿದೆ. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಜನಪ್ರಿಯವಾಗಿದೆ.