ಭಾರತ-ಪಾಕ್ ಈ ಎರಡು ರಾಷ್ಟ್ರಗಳ ನಡುವಿನ ವೈರತ್ವ ಇಡೀ ವಿಶ್ವಕ್ಕೆ ಚಿರಪರಿಚಿತ. ಆರ್ಥಿಕವಾಗಿ ಕುಸಿತ ಕಂಡುಕೊಂಡಿರುವ ಪಾಕ್ ಸ್ಥಿತಿ ಈಗ ಚಿಂತಾಜನಕವಾಗಿದ್ದು, ಯಾರೊಬ್ಬರೂ ಸಹಾಯಕ್ಕೆ ಮುಂದಾಗುತ್ತಿಲ್ಲ. ಭಾರತ ಮನಸ್ಸು ಮಾಡಿದ್ದರೂ, ಪಾಕ್ ಮಾಡಿರೋ ಮೋಸಗಳನ್ನ ನೆನಸಿಕೊಂಡು, ಸುಮ್ಮನೆ ಕೂತಿದೆ.
ಈ ನಡುವೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತವನ್ನ’ಸ್ನೇಹಿತ’ ಎಂದು ಉಲ್ಲೇಖಿಸಿದ್ದಾರೆ. ತಕ್ಷಣವೇ ತಮ್ಮ ಮಾತನ್ನ ಸರಿಪಡಿಸಿಕೊಂಡ ಮಿಸ್ಟರ್ ಭುಟ್ಟೋ, ಭಾರತ ತಮ್ಮ’ನೆರೆಯ’ರಾಷ್ಟ್ರ ಎಂದು ಹೇಳಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಕಾಶ್ಮೀರದ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಭುಟ್ಟೋ, ಸರ್ಕಾರ ಕಾಶ್ಮೀರವನ್ನು ಕಾರ್ಯಸೂಚಿಯ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದು ಪಾಕ್ ಸರ್ಕಾರ ಮುಂದಿರುವ ಹತ್ತರಲ್ಲಿ ಒಂದು ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ಧಾರೆ.
”ಕಾಶ್ಮೀರದ ವಿಷಯ ಬಂದಾಗೆಲ್ಲ ನಮ್ಮ ಸ್ನೇಹಿತರು………….. (ತಕ್ಷಣವೇ ಮಾತು ಸರಿಪಡಿಸಿಕೊಂಡು) ನೆರೆಯ ದೇಶದವರು, ನಮ್ಮ ಜೊತೆ ವಾದ-ವಿವಾದಗಳನ್ನ ಮಾಡಿ ಆಕ್ಷೇಪಿಸುತ್ತಾರೆ.” ಎನ್ನುವ ಮೂಲಕ ನಗ್ತಾ ನಗ್ತಾನೇ ತಾವು ಮಾಡಿದ್ದ ತಪ್ಪನ್ನ ತಿದ್ದಿಕೊಂಡಿದ್ದರು ಭುಟ್ಟೋ.