ಬೆಂಗಳೂರು : ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ ‘ಬಾಪೂಜಿ ಸೇವಾ ಕೇಂದ್ರ.
ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಸಮ್ಮಿಲನಗೊಳಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.ಇದರಿಂದ ಸಾರ್ವಜನಿಕರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪಿದೆ. ‘ಬಾಪೂಜಿ ಸೇವಾ ಕೇಂದ್ರ’ದಿಂದ ದೊರೆಯುವ ಸೇವೆಗಳು ಕೆಳಕಂಡಂತೆ ಇವೆ:
ಕಂದಾಯ ಇಲಾಖೆಯ 40 ಸೇವೆಗಳು
L ಜನಸಂಖ್ಯೆ ದೃಢೀಕರಣ ಪತ್ರ
- ಜಾತಿ ಮತ್ತುಆದಾಯ ದೃಢೀಕರಣ ಪತ್ರ
- ಹಿಂದುಳದವರ್ಗಗಳಪ್ರಮಾಣ ಪತ್ರ (ಪ್ರವರ್ಗ-1)
- ಅನುಸೂಚಿತಜಾತಿಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ).
- ಇತರೆಹಿಂದುಳಿದವರ್ಗಗಳ ದೃಢೀಕರಣ ಪತ್ರ (ಕೇಂದ್ರ)
- ವಾಸಸ್ಥಳದೃಢೀಕರಣಪತ್ರ
- ಆದಾಯದೃಢೀಕರಣಪತ್ರ
8.ಗೇಣಿ ರಹಿತ ದೃಢೀಕರಣ ಪತ್ರ
- ವಿಧವಾದೃಢೀಕರಣಪತ್ರ
- ಜೀವಂತದೃಢೀಕರಣಪತ್ರ
- ವ್ಯವಸಾಯಗಾರರಕುಟುಂಬದಸದಸ್ಯ ದೃಢೀಕರಣ ಪತ್ರ
- ಮರುವಿವಾಹವಾಗದಿರುವದೃಢೀಕರಣ ಪತ್ರ
- ಜಮೀನುಇಲ್ಲದಿರುವದೃಢೀಕರಣ ಪತ್ರ
- ಮೃತರಕುಟುಂಬದಜೀವಂತ ಸದಸ್ಯರ ದೃಢೀಕರಣ ಪತ್ರ
- ನಿರುದ್ಯೋಗಿದೃಢೀಕರಣಪತ್ರ
16. ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
- ವ್ಯವಸಾಯಗಾರರದೃಢೀಕರಣಪತ್ರ