alex Certify ಅಪ್ಪನ ಪ್ರೀತಿಗೆ ಎಣೆ ಎಲ್ಲಿ ? ಮಗನನ್ನು ಕೂರಿಸಿಕೊಂಡು ಸ್ಕೂಟರ್​ ತಳ್ಳುತ್ತಿರುವ ಅಪ್ಪನ ವಿಡಿಯೋಗೆ ನೆಟ್ಟಿಗರು ಭಾವುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಪ್ರೀತಿಗೆ ಎಣೆ ಎಲ್ಲಿ ? ಮಗನನ್ನು ಕೂರಿಸಿಕೊಂಡು ಸ್ಕೂಟರ್​ ತಳ್ಳುತ್ತಿರುವ ಅಪ್ಪನ ವಿಡಿಯೋಗೆ ನೆಟ್ಟಿಗರು ಭಾವುಕ

ಭಾರೀ ಮಳೆಯಿಂದಾಗಿ ದಕ್ಷಿಣ ಭಾರತದ ಹಲವು ಭಾಗಗಳು ಜಲಾವೃತಗೊಂಡಿವೆ. ಈ ಮಧ್ಯೆ, ತಂದೆಯೊಬ್ಬರು ನೀರಿನಿಂದ ತುಂಬಿರುವ ರಸ್ತೆಯಲ್ಲಿ ಮಗನನ್ನು ಸ್ಕೂಟರ್​ ಮೇಲೆ ಕುಳ್ಳರಿಸಿಕೊಂಡು ತಾವು ಅದನ್ನು ತಳ್ಳುತ್ತಾ ಶಾಲೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಸ್ಕೂಟರ್ ಅನ್ನು ನೀರಿನಿಂದ ತುಂಬಿದ ರಸ್ತೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಮಳೆನೀರು ತುಂಬಿ ಸ್ಕೂಟರ್​ ಕೆಟ್ಟು ಹೋದಾಗ, ಅಪ್ಪ, ಮಗನನ್ನು ಅದರ ಮೇಲೆ ಕುಳ್ಳರಿಸಿಕೊಂಡು ಅದನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ.

ಮಗ ಸ್ಕೂಟರ್​ ಮೇಲೆ ಛತ್ರಿ ಹಿಡಿದು ಕುಳಿತುಕೊಂಡಿದ್ದರೆ, ಸ್ಕೂಟರ್​ ತಳ್ಳಿಕೊಂಡು ಹೋಗುತ್ತಿರುವ ಅಪ್ಪ ಬಹಳ ಸುಸ್ತಾಗಿರುವಂತೆ ಕಾಣಿಸುತ್ತಿದೆ. ಮಕ್ಕಳ ಮೇಲಿನ ತಂದೆಯ ಪ್ರೀತಿ ಅಮೋಘವಾದದ್ದು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಭಾರಿ ವೈರಲ್​ ಆಗುತ್ತಿದೆ.

ಸಂದರ್ಭ ಬಂದರೆ ಅಪ್ಪನಾದವ ತನ್ನ ಮಕ್ಕಳ ಹಿತಕ್ಕಾಗಿ ಎಂಥ ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳಬಲ್ಲ ಎಂಬ ಹಿನ್ನೆಲೆಯ ಧ್ವನಿಯೊಂದಿಗೆ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಇದು ನೆಟ್ಟಿಗರ ಮನ ಗೆದ್ದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...