ತಾಪಮಾನ ಏರಿಕೆಯಾಗುತ್ತಿದ್ದಂತೆ ಪರಿಸರದಲ್ಲಿ ಒಂದಷ್ಟು ಬದಲಾವಣೆ ತನ್ನಿಂತಾನೆ ಆರಂಭವಾಗುತ್ತದೆ. ಈಗ ತಾಪಮಾನ ಏರಿಕೆಯಾಗುವ ಹೊತ್ತಲ್ಲಿ ಆಮೆಗಳು ಸಾಮೂಹಿಕವಾಗಿ ಮರಳಿನ ಗೂಡುಕಟ್ಟುವ ವಿಶೇಷ ಸಂದರ್ಭವೊಂದು ಒಡಿಶಾ ಕರಾವಳಿಯಲ್ಲಿ ನಡೆದಿದೆ.
ಇದರ ವಿಡಿಯೋ ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ. ಅಳಿವಿನಂಚಿನಲ್ಲಿರುವ ಸಮುದ್ರ ಆಮೆಗಳು ಮರಳಿನಲ್ಲಿ ಮೊಟ್ಟೆಯಿಡಲು ಒಡಿಶಾದ ರಾಜ್ಯದ ಗಹಿರ್ಮಠ ಮತ್ತು ರುಶಿಕುಲ್ಯ ರೂಕರಿಗಳಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯ ಪರಿಸರ ಆಸಕ್ತರಿಗೆ ಸಂತೋಷ ತಂದಿದೆ.
BIG NEWS: ಟ್ರ್ಯಾಕ್ಟರ್ – ಬೈಕ್ ನಡುವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ದುರ್ಮರಣ
ಗಹಿರ್ಮಠದಲ್ಲಿ ಸಾಮೂಹಿಕ ಗೂಡುಕಟ್ಟುವಿಕೆಯ ವಿಡಿಯೋವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪೋಸ್ಟ್ ಮಾಡಿದ್ದಾರೆ. ಆ ಪ್ರದೇಶದಲ್ಲಿ ಸುಮಾರು 2.45 ಲಕ್ಷ ಆಮೆಗಳಿರಬಹುದೆಂದು ಅಂದಾಜಿಸಿದ್ದಾರೆ.
ಮೊಟ್ಟೆ ಇಟ್ಟು ಆಮೆಗಳು ಸಮುದ್ರಕ್ಕೆ ಮರಳುತ್ತಿದ್ದು ಮೇ ವೇಳೆಗೆ ಮೊಟ್ಟೆಯಿಂದ ಹೊರಬರುವ ಮರಿ ಆಮೆಗಳು ಸಮುದ್ರದತ್ತ ಮುಖಮಾಡಲಿವೆ.