ವಿದ್ಯುತ್ ಚಾಲಿತ ಸ್ಕೂಟರ್ ಗಳಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುವ ಘಟನೆಗಳ ಸುದ್ದಿಯನ್ನು ಕೇಳುತ್ತಲೇ ಇರುತ್ತೀರಿ. ಇಂತಹ ಪ್ರಕರಣಗಳಿಗೆ ಮತ್ತೊಂದು ಘಟನೆ ಸೇರಿದ್ದು ಮಹಾರಾಷ್ರ್ವದ ಪುಣೆಯಲ್ಲಿ ಓಲಾ ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡಿದೆ.
ಓಲಾ S1 ಪ್ರೊ ಬೆಂಕಿಗೆ ಆಹುತಿಯಾಗಿದೆ. ಪಿಂಪ್ರಿ ಚಿಂಚ್‌ವಾಡ್‌ನ ಡಿವೈ ಪಾಟೀಲ್ ಕಾಲೇಜು ಬಳಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆದರೆ ಘಟನೆಯ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕಂಪನಿಯು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಾಹನದಲ್ಲಿ ಸರ್ವಿಸ್ ವೇಳೆ ಬಳಸಿದ ಕಳಪೆ ಉಪಕರಣಗಳು ಕಾರಣವೆಂದು ತಿಳಿಸಿದೆ. ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಘಟನೆಯ ದೃಶ್ಯದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.
ಇದರಲ್ಲಿ ತಿಳಿಸಿರುವಂತೆ ಈ ಆತಂಕಕಾರಿ ಘಟನೆಯು ಡಿವೈ ಪಾಟೀಲ್ ಕಾಲೇಜು ಪಾರ್ಕಿಂಗ್ ಪ್ರದೇಶದ ಬಳಿ ಸಂಭವಿಸಿದೆ. ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ, ಆದರೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ
ಹೆಚ್ಚು ಹಾನಿಯಾಗಿದೆ ಎಂದು ತಿಳಿಸಲಾಗಿದೆ.
ವಿಡಿಯೋ ವೈರಲ್ ಆಗಿದ್ದು ಹಲವರು ಸ್ಕೂಟರ್ ನ ಗುಣಮಟ್ಟವನ್ನ ಟೀಕಿಸಿದ್ದಾರೆ.