ಥಾಯ್ಲೆಂಡ್‌ನಿಂದ ಆನೆಯೊಂದು ಕಬ್ಬಿನ ಟ್ರಕ್ಗಳನ್ನು ನಿಲ್ಲಿಸಿ ಕಬ್ಬನ್ನು ತಿಂದು ನಂತರ ಟ್ರ್ಯಾಕ್ಟರ್ ಅನ್ನು ಮುಂದಕ್ಕೆ ಬಿಡುವ ವಿಡಿಯೋ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಇದೀಗ ಮತ್ತೊಂದು ವೀಡಿಯೊ ವೈರಲ್ ಆಗಿದೆ.
ಇದರಲ್ಲಿ ಆನೆ ಸ್ನಾನ ಮಾಡುವುದನ್ನು ನೋಡಬಹುದು. ಹಳ್ಳ, ಕೊಳ್ಳಗಳಲ್ಲಿ ಆನೆ ಸ್ನಾನ ಮಾಡುವುದನ್ನು ನೀವು ಸಾಮಾನ್ಯವಾಗಿ ನೋಡಿರಬಹುದು. ಅಥವಾ ಬೇರೆ ಯಾರಾದರೂ ಇದಕ್ಕೆ ಪೈಪ್ಮೂಲಕ ಸ್ನಾನ ಮಾಡಿಸುವುದನ್ನೂ ನೋಡಿರಬಹುದು. ಆದರೆ ಇದು ಬಹಳ ವಿಭಿನ್ನ ಮನಮೋಹನ ಸ್ನಾನವಾಗಿದೆ.
ಏಕೆಂದರೆ ಈ ವೀಡಿಯೋದಲ್ಲಿ, ಆನೆಯು ನೀರಿನ ಪೈಪ್ ಅನ್ನು ಹಿಡಿದು ಸ್ನಾನ ಮಾಡುವುದನ್ನು ನೋಡಬಹುದು. ತನ್ನ ಸೊಂಡಿಲಿನಿಂದ ಪೈಪ್ ಹಿಡಿದು ಮನುಷ್ಯರ ಸಹಾಯವಿಲ್ಲದೆ, ತನ್ನ ದೇಹದ ಎಲ್ಲಾ ಭಾಗಗಳಿಗೆ ನೀರನ್ನು ಸಿಂಪಡಿಸಿಕೊಂಡು ಸ್ನಾನ ಮಾಡಿದೆ. ಇದನ್ನು ನೋಡಿ ಸೋ ಕ್ಯೂಟ್ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿದ್ದಾರೆ.