ನವದೆಹಲಿ: ಬೀದಿಬದಿಯ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅಂಥದ್ದೇ ಒಂದು ಪ್ರತಿಭೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಬೀದಿಯಲ್ಲಿ ವ್ಯಕ್ತಿಯೊಬ್ಬರು ಮಂತ್ರಮುಗ್ಧರಾಗಿ ಕೀಬೋರ್ಡ್ ನುಡಿಸುತ್ತಿದ್ದು ಅದೀಗ ನೆಟ್ಟಿಗರ ಮನಸ್ಸು ಗೆದ್ದಿದೆ.
ಜನಪ್ರಿಯ ಬಾಲಿವುಡ್ ಹಾಡುಗಳನ್ನು ಅವರು ನುಡಿಸುತ್ತಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಐಸಾಕ್ ನ್ಯೂಟನ್ ಎಂದು ಗುರುತಿಸಲಾದ ಈ ಕಲಾವಿದ “ತುಜೆ ದೇಖಾ ತೊ ಯೇ ಜನ ಸನಮ್” ಹಾಡಿಗೆ ಕೀಬೋರ್ಡ್ ನುಡಿಸುವುದನ್ನು ವಿಡಿಯೋದಲ್ಲಿ ಕೇಳಬಹುದು.
ಹಿಂದಿನ ಪ್ರಸಿದ್ಧ ಧಾರಾವಾಹಿ ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾದಲ್ಲಿನ ಅಯ್ಯರ್ ಪಾತ್ರಧಾರಿಯಂತೆ ಈ ಕಲಾವಿದ ಕಾಣಿಸುತ್ತಿರುವುದಾಗಿ ಹಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಬ್ಬರು ಈ ಕಲಾವಿದ ಹಾಸ್ಯನಟರಾಗಿದ್ದ ರಾಜು ಶ್ರೀವಾಸ್ತವ್ ಅವರನ್ನು ಹೋಲುತ್ತಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಇವರು ತಮ್ಮ ಕಲೆಯಿಂದ ಮತ್ತು ಮುಖ ಚಹರೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.