
ಅಫ್ಘಾನಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿರುವ ನ್ಯೂಜಿಲ್ಯಾಂಡ್ ತಂಡವು ಉತ್ತಮ ಫೀಲ್ಡಿಂಗ್ ಗೆ ಹೆಸರುವಾಸಿಯಾಗಿದೆ. ಅಫ್ಘಾನಿಸ್ತಾನವನ್ನು ಅತ್ಯಲ್ಪ ಮೊತ್ತಕ್ಕೆ ಕಟ್ಟಿಹಾಕಲು ಕಿವೀಸ್ ಬೌಲರ್ ಗಳು ಸೊಗಸಾದ ಪ್ರದರ್ಶನವನ್ನು ನೀಡಿದ್ದಾರೆ. ನ್ಯೂಜಿಲ್ಯಾಂಡ್ ದಾಂಡಿಗರು ಯಾವುದೇ ಗಡಿಬಿಡಿ ಇಲ್ಲದೆ ಅತ್ಯಲ್ಪ ಮೊತ್ತವನ್ನು ಬೆನ್ನಟ್ಟಿ, ಸೆಮೀಸ್ ಪ್ರವೇಶಿಸಿದ್ದಾರೆ.
ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ, ಡ್ಯಾರಿಲ್ ಮಿಚೆಲ್ ಮಿಡ್-ವಿಕೆಟ್ ಬೌಂಡರಿಯಲ್ಲಿ ರಶೀದ್ ಖಾನ್ ಜೊತೆಗೆ ಸ್ಟ್ರೈಕ್‌ನಲ್ಲಿ ನಿಂತಿದ್ದರು. ಜಿಮ್ಮಿ ನೀಶಮ್ ಅವರ ಬೌಲಿಂಗ್ ಗೆ ರಶೀದ್ ಖಾನ್ ಮಿಡ್-ವಿಕೆಟ್ ಕಡೆಗೆ ಸಿಕ್ಸರ್ ಸಿಡಿಸಿದ್ದಾರೆ. ಇನ್ನೇನು ಬೌಂಡರಿ ದಾಟಬೇಕು ಅನ್ನೋವಷ್ಟರಲ್ಲಿ ಅದೆಲ್ಲಿದ್ದರೋ ಏನೋ ಮಿಚೆಲ್ ಚೆಂಡನ್ನು ಹಿಡಿದು ಬೌಂಡರಿ ದಾಟದಂತೆ ತಡೆದಿದ್ದಾರೆ.
ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಜಿಗಿದು ಚೆಂಡನ್ನು ಅಷ್ಟೇ ವೇಗವಾಗಿ ಮೈದಾನದತ್ತ ಎಸೆದಿದ್ದಾರೆ. ಹೀಗಾಗಿ ಅಫ್ಘನ್ನರು ಕೇವಲ 2 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ಆದರೆ, ಮಿಚೆಲ್ ಹಿಡಿದಿರುವ ಅದ್ಭುತ ಕ್ಯಾಚ್ ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ. ಟ್ವಿಟ್ಟರ್ ತುಂಬೆಲ್ಲಾ ಮಿಚೆಲ್ ಕ್ಯಾಚ್ ಹಿಡಿದಿರುವ ವಿಡಿಯೋಗಳು ಹರಿದಾಡುತ್ತಿದ್ದು, ಇವರೇನು ಹಕ್ಕಿಯೋ ಅಥವಾ ವಿಮಾನವೋ ಎಂದೆಲ್ಲಾ ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
https://twitter.com/IrfanAm71763527/status/1457316212438876164?ref_src=twsrc%5Etfw%7Ctwcamp%5Etweetembed%7Ctwterm%5E1457316212438876164%7Ctwgr%5E%7Ctwcon%5Es1_&ref_url=https%3A%2F%2Fsports.ndtv.com%2Ficc-t20-world-cup-2021%2Fdaryl-mitchells-unreal-fielding-effort-in-t20-world-cup-is-straight-out-of-a-superhero-movie-watch-2602924