alex Certify Viral Video| ಗೇಟ್ ಹಾಕಿದ್ದರೂ ರೈಲು ಹಳಿ ದಾಟಲು ಹೋದ ರಿಕ್ಷಾ ಚಾಲಕ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video| ಗೇಟ್ ಹಾಕಿದ್ದರೂ ರೈಲು ಹಳಿ ದಾಟಲು ಹೋದ ರಿಕ್ಷಾ ಚಾಲಕ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್

ಕೈಗಾಡಿ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ರೈಲು ಬರುವ ಹಿನ್ನೆಲೆಯಲ್ಲಿ ಗೇಟ್ ಹಾಕಿದ್ದರೂ ಸಹ ನಿರ್ಲಕ್ಷ್ಯದಿಂದ ಹಳಿ ದಾಟಲು ಯತ್ನಿಸಿದ್ದು, ಈ ವೇಳೆ ರೈಲು ಅತಿ ವೇಗವಾಗಿ ಬಂದಿದ್ದು ಅದೃಷ್ಟವಶಾತ್ ಆತ ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಅಲಿಘರ್ ನಲ್ಲಿ ಈ ಘಟನೆ ನಡೆದಿದ್ದು, ಗೇಟ್ ಹಾಕಿದ್ದರೂ ಸಹ ಬಹಳಷ್ಟು ಮಂದಿ ಹಳಿ ದಾಟುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಅದೇ ರೀತಿ ಈ ಕೈಗಾಡಿ ರಿಕ್ಷಾ ಚಾಲಕ ಹಳಿ ದಾಟಲು ಮುಂದಾಗಿದ್ದಾನೆ.

ಯಾವುದೋ ಯೋಚನೆಯಲ್ಲಿ ಮಗ್ನನಾಗಿರುವಂತೆ ಕಂಡುಬರುವ ಈತ, ರೈಲು ಬರುತ್ತಿರುವುದನ್ನು ಗಮನಿಸಿಯೇ ಇರುವುದಿಲ್ಲ. ಇನ್ನೇನು ರೈಲು ಈತನಿಗೆ ಡಿಕ್ಕಿ ಹೊಡೆಯಬೇಕು ಎನ್ನುವಾಗ ಕೈಗಾಡಿ ರಿಕ್ಷಾ ಬಿಟ್ಟು ಹಳಿಯಿಂದ ಹೊರಗೆ ಹಾರಿದ್ದಾನೆ.

ಆತನ ಕೈಗಾಡಿ ರಿಕ್ಷಾ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರೈಲ್ವೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಡಿಯೋ ನೋಡಿದ ಅನೇಕರು ಕೈಗಾಡಿ ರಿಕ್ಷಾ ಚಾಲಕನ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಲ್ಪ ಸಾವಧಾನ ವಹಿಸಿದರೆ ಎಲ್ಲವೂ ಸರಿಯಾಗುತ್ತದೆ. ಆದರೆ ತಮಗೆ ಸಮಯವೇ ಇಲ್ಲವೇನೋ ಎಂಬಂತೆ ವರ್ತಿಸಲು ಹೋಗಿ ಹಲವರು ಜೀವವನ್ನೇ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...