ಭಾರತವು ವೈವಿಧ್ಯಮಯ ಪಾಕಪದ್ಧತಿಯ ದೇಶವಾಗಿದೆ. ಆಹಾರ ಬ್ಲಾಗರ್‌ಗಳು ದೇಶದ ಮೂಲೆ ಮೂಲೆ ಹುಡುಕಿ ವಿಭಿನ್ನ, ವಿಶಿಷ್ಟ ಶೈಲಿಯ ಅಡುಗೆ ತಯಾರಕರ ಬಗ್ಗೆ ವಿಡಿಯೋ ಸಹಿತ ನಮಗೆ ಮಾಹಿತಿ ನೀಡುತ್ತಾರೆ.
ದೆಹಲಿಯ ಕುಲ್ಹಾದ್ ಮೊಮೊಸ್, ಇಂದೋರ್‌ನ ಮಿರ್ಚಿ ಐಸ್ ಕ್ರೀಮ್ ರೋಲ್ ಮತ್ತು ಅಹಮದಾಬಾದ್‌ನ ಓರಿಯೊ ಪಕೋಡಾ ಮುಂತಾದ ವಿಲಕ್ಷಣವಾದ ಖಾದ್ಯಗಳನ್ನು ಬಹುಶಃ ನೀವು ಇಂಟರ್ನೆಟ್ ನಲ್ಲಿ ಈಗಾಗಲೇ ನೋಡಿರಬಹುದು. ಇದೀಗ ನಾಗ್ಪುರದ ಹಲ್ವಾ ಪರಾಠ ತಯಾರಿಸುವ ವಿಡಿಯೋ ವೈರಲ್ ಆಗಿದೆ.
ನಾಗ್ಪುರದ ಬಾಬಾ ತಾಜ್ ದರ್ಗಾದ ಹೊರಗೆ ಅತ್ಯಂತ ದೊಡ್ಡದಾದ ಪರಾಠವನ್ನು ಮಾಡಲಾಗುತ್ತದೆ. ಪ್ರಸಿದ್ಧ ಪರಾಠವು ಎರಡೂವರೆ ಅಡಿ ಗಾತ್ರದಲ್ಲಿದೆ. ಇದನ್ನು 700-ಗ್ರಾಂ ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ನಂತರ ಅದನ್ನು 100-ಗ್ರಾಂ ಡಾಲ್ಡಾ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಬೆರೆಸಲಾಗುತ್ತದೆ. ಪರಾಠವನ್ನು ಬೇಸನ್ ಹಲ್ವಾದೊಂದಿಗೆ ಬಡಿಸಲಾಗುತ್ತದೆ.
ಮರದ ರೋಲಿಂಗ್ ಬೋರ್ಡ್ ಮೇಲೆ ಚಪಾತಿ ಲಟ್ಟಿಸುವಂತೆ ತೆಳುವಾಗಿ ಹರಡುತ್ತಾರೆ. ಪರಾಠವು ಒಡೆಯುವುದನ್ನು ತಪ್ಪಿಸಲು ಲಟ್ಟಿಸಿದ ಹಿಟ್ಟಿಗೆ ಸಣ್ಣ ರಂಧ್ರಗಳನ್ನು ಮಾಡಲಾಗುತ್ತದೆ. ನಂತರ ಅದನ್ನು ಎಣ್ಣೆಯಲ್ಲಿ ಎರಡು ನಿಮಿಷಗಳ ಕಾಲ ಲಘುವಾಗಿ ಹುರಿಯಲಾಗುತ್ತದೆ. ಶೀಘ್ರದಲ್ಲೇ ತೆಳುವಾದ ಮತ್ತು ಗರಿಗರಿಯಾದ ಪರಾಠವನ್ನು ತಯಾರಿಸಲಾಗುತ್ತದೆ. ಅನುಭವಿ ತಯಾರಕರು ಕುಶಲತೆಯಿಂದ ಖಾದ್ಯ ತಯಾರಿಸುವುದನ್ನು ನೋಡುವುದೇ ಒಂದು ವಿಸ್ಮಯ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ರೋಮಾಂಚನಗೊಂಡಿದ್ದಾರೆ. ಆದರೆ, ಕೆಲವರು ನೈರ್ಮಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=MMDmcaj9CX8