alex Certify ದೃಷ್ಟೀಹಿನ ಮಗನಿಗೆ ಫುಟ್ಬಾಲ್​ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಬಗ್ಗೆ ಇಂಚಿಂಚೂ ವಿವರಿಸಿದ ಅಮ್ಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೃಷ್ಟೀಹಿನ ಮಗನಿಗೆ ಫುಟ್ಬಾಲ್​ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಬಗ್ಗೆ ಇಂಚಿಂಚೂ ವಿವರಿಸಿದ ಅಮ್ಮ….!

ತಾಯಿಯ ಪ್ರೀತಿಯು ಶುದ್ಧ ಮತ್ತು ನಿಸ್ವಾರ್ಥ ರೂಪದ್ದೆಂದು ಹೇಳಬೇಕಿಲ್ಲ. ಇದಕ್ಕೆ ಉದಾಹರಣೆಗೆ ಕೊರತೆಯೇ ಇಲ್ಲ. ಬೇರೆ ಯಾರೂ ಇಲ್ಲದಿರುವ ಸಂದರ್ಭ ಎದುರಾದಾಗ ನಿಮ್ಮ ಪಕ್ಕದಲ್ಲಿ ಒಬ್ಬ ವ್ಯಕ್ತಿ ಇದ್ದರೆ ಅದು ನಿಮ್ಮ ತಾಯಿ ಮಾತ್ರ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಹೃದಯಸ್ಪರ್ಶಿ ವಿಡಿಯೊದಲ್ಲಿ ತಾಯಿಯೊಬ್ಬರು ತನ್ನ ದೃಷ್ಟೀಹಿನ ಮಗನಿಗೆ ಫುಟ್​ಬಾಲ್​ ಕ್ರೀಡಾಂಗಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವಿವರಿಸಿದ ಕ್ಷಣ ಕಾಣಬಹುದು

ಕ್ರೀಡಾಂಗಣ ಪ್ರೇಕ್ಷಕರ ಗ್ಯಾಲರಿಯಲ್ಲಿ ಕ್ರೀಡಾಪಟು ಧರಿಸಿದ ಜರ್ಸಿಯನ್ನೇ ತೊಟ್ಟ ಅಮ್ಮ – ಮಗ ಕಾಣಿಸಿಕೊಂಡಿದ್ದಾರೆ. ಸ್ಟೇಡಿಯಂನಲ್ಲಿನ ಸನ್ನಿವೇಶ ತಿಳಿಸುವ ತಾಯಿ ಮೊದಲು ತನ್ನ ಮಗನಿಗೆ ಧ್ವಜಗಳನ್ನು ಎಲ್ಲಿ ಇರಿಸಲಾಗಿದೆ ಎಂದು ವಿವರಿಸುತ್ತಾಳೆ, ಮಗನ ಕೈ ಹಿಡಿದ ಆಕೆ ಯಾವ ದಿಕ್ಕಿನಲ್ಲಿ ಏನಿದೆ ಎಂದು ವಿವರಿಸುತ್ತಾಳೆ. ಕೊನೆಯಲ್ಲಿ ನಾನು ಹೇಳಿದ್ದು ಅರ್ಥವಾಯಿತೇ ಎಂದು ಆಕೆ ಕೇಳುವುದು ಭಾವುಕವಾಗಿದೆ.

ಈ ವಿಡಿಯೊವನ್ನು ಫ್ಲಾ ಪೊಮೆರೋಡ್​ ಎಂಬೈಕ್ಸಡಾ ಎಂಬ ಹೆಸರಿನ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಹಂಚಿಕೊಳ್ಳಲಾಗಿದೆ. ತಾಯಿ ಕ್ರಿಸ್ಟಿನಾ ತನ್ನ ಮಗ ಮಾಕೋರ್ಸ್​ ಫೆಲಿಪ್​ಗೆ ಜುಲೈ 24ರಂದು ನಡೆದ ಫ್ಲೆಮೆಂಗ್ಡೊ- ಅವೈ ನಡುವಿನ ಆಟದ ವಿವರಗಳನ್ನು ವಿವರಿಸುತ್ತಾಳೆ ಎಂದು ಶೀರ್ಷಿಕೆ ಇದೆ. ತಾಯಿ ಮತ್ತು ಮಗನ ನಡುವಿನ ಈ ಕ್ಷಣಗಳು ಅನೇಕರ ಹೃದಯವನ್ನು ತಟ್ಟಿದೆ. ಅನೇಕರು ತಾಯಿಯ ಪ್ರೀತಿಯನ್ನು ಹಾಡಿ ಹೊಗಳಿದ್ದಾರೆ.

https://www.instagram.com/reel/CgZ5IdvA0Ao/?utm_source=ig_embed&ig_rid=05af58d2-cbdb-4e10-81dd-ede071772f17

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...