alex Certify ಮದುವೆಯಾಗದವರಿಗೆ ಸಖತ್​ ಸಲಹೆ ನೀಡಿದ ಧೋನಿ : ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗದವರಿಗೆ ಸಖತ್​ ಸಲಹೆ ನೀಡಿದ ಧೋನಿ : ವೈರಲ್​ ಆಯ್ತು ವಿಡಿಯೋ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಸಂದರ್ಶನದ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸೋದ್ರಲ್ಲಿ ಸಖತ್ ಫೇಮಸ್​ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಎಂಎಸ್​ಧೋನಿ ಇನ್ನೂ ಮದುವೆಯಾಗದ ತರುಣರಿಗೆ ಕೆಲವು ಟಿಪ್ಸ್​ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಎಂಎಸ್​ಧೋನಿ, ಕೆಲವು ಮೌಲ್ಯಯುತ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಬ್ಯಾಚುಲರ್​ಗಳಿಗೆ ಕೆಲವು ಸಲಹೆಗಳನ್ನು ನೀಡಿದ ಎಂಎಸ್​ಧೋನಿ, ಸಂಬಂಧಗಳ ಬಗ್ಗೆ ಅನೇಕರು ಹೊಂದಿರುವ ಕೆಲವು ತಪ್ಪು ಕಲ್ಪನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಯಾರ್ಯಾರಿಗೆ ಗರ್ಲ್​ಫ್ರೆಂಡ್​ ಇದ್ದಾರೋ ಅವರೆಲ್ಲ ಒಂದು ತಪ್ಪು ಕಲ್ಪನೆಯಲ್ಲಿ ಬದುಕುತ್ತಾ ಇರ್ತಾರೆ. ಆ ತಪ್ಪು ಕಲ್ಪನೆಗೆ ನಾನಿಂದು ಸ್ಪಷ್ಟನೆ ನೀಡುತ್ತೇನೆ. ನನಗೆ ಸಿಕ್ಕವಳು ಉಳಿದೆಲ್ಲರಿಗಿಂತ ಭಿನ್ನವಾಗಿದ್ದಾಳೆ ಎಂದು ಎಂದಿಗೂ ಯೋಚಿಸಬೇಡಿ ಎಂದು ಹೇಳಿದ್ದಾರೆ.

ಎಂಎಸ್​ಧೋನಿಯ ಈ ಪ್ರಾಮಾಣಿಕ ಹಾಗೂ ಹಾಸ್ಯಮಯ ಹೇಳಿಕೆಯು ನೆರೆದಿದ್ದ ಪ್ರೇಕ್ಷಕರ ನಗುವಿಗೆ ಕಾರಣವಾಯಿತು. ಧೋನಿ ಈ ಹೇಳಿಕೆ ಬಳಿಕ ನೆರೆದಿದ್ದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಎಂಎಸ್​ ಧೋನಿ 2010ರ ಜುಲೈ 4ರಂದು ಸಾಕ್ಷಿ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿ ಝೀವಾ ಹೆಸರಿನ ಪುತ್ರಿಯನ್ನು ಹೊಂದಿದ್ದಾರೆ. ಸದ್ಯ ಈ ದಂಪತಿ ತಮ್ಮ ದಾಂಪತ್ಯ ಜೀವನದ 13ನೇ ವಸಂತದಲ್ಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...