
ಸ್ಕಾಟ್ಲೆಂಡ್ ವಿರುದ್ಧದ ಅದ್ಭುತ ಗೆಲುವಿನ ರೂಪದಲ್ಲಿ ತಮ್ಮ ತಂಡದಿಂದ ಪರಿಪೂರ್ಣ ಉಡುಗೊರೆಯನ್ನು ವಿರಾಟ್ ಕೊಹ್ಲಿ ಪಡೆದಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧದ ಗೆಲುವಿನ ನಂತರ, ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಡ್ರೆಸ್ಸಿಂಗ್ ರೂಮ್ನಲ್ಲಿ ನಾಯಕ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಒಟ್ಟುಗೂಡಿದ್ದು, ಕೇಕ್ ಕತ್ತರಿಸುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ.
ಸಂಬಂಧಿಯೊಂದಿಗೆ ಸೆಕ್ಸ್ ಗೆ ಸಹಕರಿಸುವಂತೆ ಪತ್ನಿಗೆ ಹಿಂಸೆ ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಕೇಕ್ ಕತ್ತರಿಸುವ ವಿಡಿಯೋವನ್ನು ಹಂಚಿಕೊಂಡಿದೆ. ಕೊಹ್ಲಿ ಕೇಕ್ ಕತ್ತರಿಸಿ ಧೋನಿ ಮತ್ತು ತಂಡದ ಇತರರಿಗೆ ತಿನ್ನಿಸಲು ಉತ್ಸುಕರಾಗಿದ್ದರು. ಆದರೆ, ಧೋನಿ ಮೇಣದ ಬತ್ತಿಗಳನ್ನು ಊದುವಂತೆ ಕೊಹ್ಲಿಗೆ ನೆನಪಿಸಬೇಕಾಯಿತು. ಈ ವೇಳೆ, ಸುತ್ತಲೂ ನಿಂತಿದ್ದ ಉಳಿದ ಸಹ ಆಟಗಾರರು ನಗೆಗಡಲಲ್ಲಿ ಮುಳುಗಿದ್ರು.
ಶುಕ್ರವಾರ ಟೀಂ ಇಂಡಿಯಾ ಆಟಗಾರರು ಬಹಳ ಖುಷಿಯಾಗಿದ್ದರು. ಯಾಕಂದ್ರೆ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಸ್ಕಾಟ್ಲೆಂಡ್ ಭಾರತಕ್ಕೆ ಶರಣಾಯಿತು. ಅದು ಟಿ-20 ವಿಶ್ವಕಪ್ ಸೆಮಿಫೈನಲ್ ತಲುಪುವ ಭಾರತದ ಭರವಸೆಯನ್ನು ಜೀವಂತವಾಗಿರಿಸಿದೆ.