alex Certify ಸೀರೆಗಾಗಿ ಮಗನ ಜೀವ ಪಣಕ್ಕಿಟ್ಟ ಮಹಿಳೆ: ಬಾಲ್ಕನಿಯಿಂದ ಸೀರೆ ತರಲು ಬಾಲಕನಿಗೆ ಬೆಡ್ ಶೀಟ್ ಕಟ್ಟಿ ಇಳಿಬಿಟ್ಟ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಗಾಗಿ ಮಗನ ಜೀವ ಪಣಕ್ಕಿಟ್ಟ ಮಹಿಳೆ: ಬಾಲ್ಕನಿಯಿಂದ ಸೀರೆ ತರಲು ಬಾಲಕನಿಗೆ ಬೆಡ್ ಶೀಟ್ ಕಟ್ಟಿ ಇಳಿಬಿಟ್ಟ ತಾಯಿ

ಫರಿದಾಬಾದ್: ಮಹಿಳೆಯೊಬ್ಬರು ಸೀರೆಗಾಗಿ ಮಗನ ಜೀವ ಲೆಕ್ಕಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಬಾಲ್ಕನಿಗೆ ಬಿದ್ದಿದ್ದ ಸೀರೆ ತರಲು ಮಗನಿಗೆ ಬೆಡ್ ಶೀಟ್ ಕಟ್ಟಿ ಕೆಳಗಿಳಿಸಿದ ಘಟನೆ ನಡೆದಿದೆ. ಫರಿದಾಬಾದ್‌ ನ ಹೈರೈಸ್‌ ನ ಬಾಲ್ಕನಿಯಲ್ಲಿ ತಾಯಿಯೊಬ್ಬರು ಮಗನನ್ನು ಹೀಗೆ ಬೆಡ್ ಶೀಟ್ ಕಟ್ಟಿ ಇಳಿಬಿಟ್ಟ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

10 ನೇ ಮಹಡಿಯಲ್ಲಿದ್ದ ಮಹಿಳೆಯ ಸೀರೆ 9 ನೇ ಮಹಡಿ ಬಾಲ್ಕನಿಗೆ ಬಿದ್ದಿದೆ. ಆ ಮನೆಗೆ ಬೀಗ ಹಾಕಿದ್ದು, 9 ನೇ ಮಹಡಿಯ ಬಾಲ್ಕನಿಯಲ್ಲಿದ್ದ ಸೀರೆ ತೆಗೆದುಕೊಳ್ಳಲು ಮುಂದಾದ ಮಹಿಳೆ ಮಗನಿಗೆ ಬೆಡ್ ಶೀಟ್ ಕಟ್ಟಿ 10 ನೇ ಮಹಡಿಯಿಂದ ಕೆಳಗೆ ಇಳಿಬಿಟ್ಟಿದ್ದಾಳೆ. ಇದನ್ನು ಎದುರು ಮನೆಯವರೊಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ. ಬಾಲಕ 9 ನೇ ಮಹಡಿ ತಲುಪಿ ಸೀರೆ ತೆಗೆದುಕೊಂಡ ನಂತರ ಅವನ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಅವನನ್ನು ಮೇಲೆ ಎಳೆದುಕೊಳ್ಳುತ್ತಾರೆ.

ಕಳೆದ ವಾರ ಫರಿದಾಬಾದ್‌ನ ಸೆಕ್ಟರ್ 82ರ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಎದುರಿನ ಕಟ್ಟಡದ ನಿವಾಸಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ನೆರೆಹೊರೆಯವರ ಪ್ರಕಾರ, ಮಹಿಳೆ ಬೀಗ ಹಾಕಿದ ಮನೆಯಿಂದ ತನ್ನ ಸೀರೆಯನ್ನು ಮರಳಿ ಪಡೆಯುವ ಬಗ್ಗೆ ಯಾರ ಸಹಾಯ ಅಥವಾ ಸಲಹೆಯನ್ನು ಪಡೆಯಲಿಲ್ಲ. ಏಕಪಕ್ಷೀಯವಾಗಿ ತನ್ನ ಮಗನ ಜೀವಕ್ಕೆ ಅಪಾಯವನ್ನುಂಟುಮಾಡಲು ಮುಂದಾಗಿದ್ದಾಳೆ.

ಇದು ಫೆಬ್ರವರಿ 6 ಅಥವಾ 7 ರಂದು ಸಂಭವಿಸಿದೆ. ಮಹಿಳೆ ಸೀರೆಗಾಗಿ ತನ್ನ ಮಗನ ಜೀವಕ್ಕೇ ಕುತ್ತು ತರಲು ಮುಂದಾಗಿದ್ದು, ಮಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆ ಬಳಿಕೆ ಮಹಿಳೆಗೆ ನೋಟಿಸ್ ನೀಡಲಾಗಿದೆ. ಮಹಿಳೆ, ತನ್ನ ಆತುರದ ಅಪಾಯಕಾರಿ ನಿರ್ಧಾರಕ್ಕೆ ವಿಷಾದಿಸುವುದಾಗಿ ಹೇಳಿದ್ದಾರೆ.

https://youtu.be/IxRcv61Ncgc

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...