alex Certify ಅರಿಶಿನ ಶಾಸ್ತ್ರದ ವೇಳೆ ಕಪಿ ಚೆಲ್ಲಾಟ; ಆಹಾರ ಕದ್ದ ವಿಡಿಯೋ ವೈರಲ್‌ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಿಶಿನ ಶಾಸ್ತ್ರದ ವೇಳೆ ಕಪಿ ಚೆಲ್ಲಾಟ; ಆಹಾರ ಕದ್ದ ವಿಡಿಯೋ ವೈರಲ್‌ | Watch

ಸಾಮಾಜಿಕ ಜಾಲತಾಣದಲ್ಲಿ ಮಂಗನ ಕಿತಾಪತಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅರಿಶಿನ ಶಾಸ್ತ್ರದಲ್ಲಿ ಅತಿಥಿಗಳು ಸಂಭ್ರಮದಲ್ಲಿ ಮಗ್ನರಾಗಿದ್ದಾಗ, ಮಂಗವೊಂದು ಚಾಣಾಕ್ಷತನದಿಂದ ಊಟದ ತಟ್ಟೆಯಿಂದ ಆಹಾರ ಕದ್ದೊಯ್ದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.

ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಅತಿಥಿಗಳು ಮುಳುಗಿದ್ದಾಗ, ಮಂಗ ಚಾಣಾಕ್ಷತೆಯಿಂದ ಊಟದ ತಟ್ಟೆಯಿಂದ ಆಹಾರ ಕದ್ದೊಯ್ದಿದೆ. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು” ಎಂದು ಶೀರ್ಷಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಹಲವು ಹಾಸ್ಯಾತ್ಮಕ ಪ್ರತಿಕ್ರಿಯೆಗಳು ಬಂದಿವೆ.

“ಅವಕಾಶಕ್ಕಾಗಿ ಕಾಯುತ್ತಿದ್ದ ಮಂಗ, ಯಶಸ್ವಿಯಾಗಿ ಆಹಾರ ಕದ್ದಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಡಾರ್ವಿನ್ ಸಿದ್ಧಾಂತದ ಪ್ರಕಾರ ಮಂಗಗಳು ನಮ್ಮ ಪೂರ್ವಜರು, ಅವರ ಅವಕಾಶವಾದಿ ಗುಣಗಳನ್ನು ನಾವು ಪಡೆದುಕೊಂಡಿದ್ದೇವೆ” ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. “ಮಂಗನನ್ನು ಕೂಡ ಆಹ್ವಾನಿಸಬೇಕಿತ್ತು, ಯಾರೂ ಆಹ್ವಾನವಿಲ್ಲದೆ ಬರುವುದಿಲ್ಲ, ಅದು ತನ್ನ ಪಾಲಿನ ಊಟ ತಿಂದಿದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದು ಮಂಗ ಕಳ್ಳತನ ಮಾಡಿದ ಮೊದಲ ಘಟನೆಯಲ್ಲ. ಈ ಹಿಂದೆ, ಮಂಗವೊಂದು ವ್ಯಕ್ತಿಯ ಬೆನ್ನುಹೊರೆಯ ಜಿಪ್ ತೆರೆದು ಸೇಬು ಕದ್ದೊಯ್ದಿತ್ತು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...