ಗುಡುಗು ಸಹಿತ ಮಳೆಯನ್ನು ನೀವು ಸಂಭ್ರಮಿಸುವ ವರ್ಗಕ್ಕೆ ಸೇರಿದವರೇ ? ಆಗಿದ್ದರೆ ನಿಮ್ಮ ಆಲೋಚನೆ ಬದಲಿಸುವಂತೆ ಮಾಡುವ ವಿಡಿಯೋ ವೈರಲ್ ಆಗಿದೆ.
ಗುಡುಗು ಸಹಿತ ಮಳೆಯು ಸಾಮಾನ್ಯವಾಗಿ ಬಲವಾದ ಗಾಳಿ ಮತ್ತು ಭೋರ್ಗರೆತ ಇರುತ್ತದೆ. ಇಂತಹ ಸಂದರ್ಭದಲ್ಲಿ ಜನರು ಹೊರಗೆ ಹೋಗದಂತೆ ಎಚ್ಚರಿಕೆ ಇದ್ದೇ ಇರುತ್ತದೆ. ಇದು ಏಕೆಂದು ಅನೇಕರಲ್ಲಿ ಪ್ರಶ್ನೆ ಮೂಡಬಹುದು.
ಟ್ವಿಟರ್‌ನಲ್ಲಿ ವಂಡರ್ ಆಫ್ ಸೈನ್ಸ್ ಹಂಚಿಕೊಂಡ ಕ್ಲಿಪ್ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಹಚ್ಚ ಹಸಿರಿನ ಮರಗಳ ಸಾಲು ಮತ್ತು ಸುರಿಮಳೆಯ ಸುಂದರ ದೃಶ್ಯಕ್ಕೆ ವಿಡಿಯೋ ತೆರೆದುಕೊಳ್ಳುತ್ತದೆ. ಕೆಲವು ಸೆಕೆಂಡುಗಳ ನಂತರ, ಮರಗಳಲ್ಲಿ ಒಂದಕ್ಕೆ ಮಿಂಚು ಹೊಡೆಯುವುದು ಕಂಡುಬರುತ್ತದೆ.
ವಿಡಿಯೋ ಕ್ಲಿಪ್ ನೋಡಿದ ನಂತರ ಅನೇಕ ಜನರು ಗಾಬರಿಗೊಂಡು ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. “ಬಿರುಗಾಳಿಯ ಸಮಯದಲ್ಲಿ ನೀವು ಎಂದಿಗೂ ಮರದ ಕೆಳಗೆ ನಿಲ್ಲಬಾರದು” ಎಂದು ಪೋಸ್ಟ್‌ನಲ್ಲಿ ಶೀರ್ಷಿಕೆ ಇದೆ. ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ.
“ಗುಡುಗು ಸಹಿತ ಮಳೆಯ ಸಮಯದಲ್ಲಿ ಮರದ ಕೆಳಗೆ ನಿಲ್ಲದಿರುವುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನ” ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. “ಮಿಂಚಿನ ದಾಳಿಯ ನಂತರ ಈ ವಿಡಿಯೊದಲ್ಲಿ ಮರವು ಹಾನಿಗೊಳಗಾದಂತೆ ತೋರುತ್ತಿಲ್ಲ” ಎಂದು ಮತ್ತೊಬ್ಬರು ಗಮನ ಸೆಳೆದಿದ್ದಾರೆ..