ಫೆಬ್ರುವರಿ ಆರಂಭದಿಂದಲೂ ಭಾರೀ ಮಳೆಯಿಂದಾಗಿ ಪೆರುವಿನಲ್ಲಿ ಭೂಕುಸಿತ ಉಂಟಾಗುತ್ತಿದೆ. ಹಲವಾರು ಜನರ ಸಾವಿಗೆ ಇದು ಕಾರಣವಾಗಿದ್ದು, ದೇಶಾದ್ಯಂತ ಅನೇಕರು ಕಾಣೆಯಾಗಿದ್ದಾರೆ. ಪೆರುವಿನಲ್ಲಿ ಕಿರಿದಾದ ರಸ್ತೆಯಲ್ಲಿ ಭಾರಿ ಭೂಕುಸಿತದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಅನೇಕರನ್ನು ಬೆಚ್ಚಿಬೀಳಿಸಿದೆ.
ಪೌಸಾದಿಂದ ಫೆಬ್ರವರಿ 22 ರಂದು ಬಿಡುಗಡೆಯಾದ ಈ ವಿಡಿಯೋದಲ್ಲಿ, ಪರ್ವತದಿಂದ ನೂರಾರು ಟನ್ ಕಲ್ಲುಮಣ್ಣುಗಳು ಇಳಿಜಾರಿನ ಕೆಳಗೆ ಅಪ್ಪಳಿಸುವುದನ್ನು ನೋಡಬಹುದು. ಆದರೆ, ಹೆದ್ದಾರಿಯಲ್ಲಿ ನೆರೆದಿರುವ ಜನರು ವಿಚಲಿತರಾಗಿಲ್ಲ. ಬಂಡೆಯಿಂದ ದೂರ ಸರಿಯುವ ಬದಲು ಕೆಲವರು ಭೂಕುಸಿತವನ್ನು ನಿಂತು ನೋಡುತ್ತಿದ್ದಾರೆ.
ಆಶ್ಚರ್ಯಕರವಾಗಿ, ಸ್ಥಳೀಯರಲ್ಲಿ ಒಬ್ಬರು ಇದನ್ನು ಸೆರೆ ಹಿಡಿಯಲು ಸ್ಮಾರ್ಟ್ಫೋನ್ಗಾಗಿ ತನ್ನ ಮಿನಿಬಸ್‌ನತ್ತ ಧಾವಿಸುತ್ತಿರುವುದನ್ನು ಕಾಣಬಹುದು. ಹೆದ್ದಾರಿಯಲ್ಲಿದ್ದ ಕಾರುಗಳು ಮತ್ತು ಇತರ ವಾಹನಗಳು ಬಂಡೆಯಿಂದ ಕೇವಲ ಇಂಚುಗಳಷ್ಟು ದೂರದಲ್ಲಿದ್ದವು ಎಂಬುದು ಗಮನಿಸಬೇಕಾದ ಸಂಗತಿ.