ಲಾಟರಿ ಅಂಗಡಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಬೆನ್ನಲ್ಲೇ ಕೇರಳದಲ್ಲಿ ವ್ಯಕ್ತಿಯೊಬ್ಬ ಅಂಗಡಿಗೆ ಬೆಂಕಿಹಚ್ಚಿ ಬಂಧನಕ್ಕೊಳಗಾಗಿದ್ದಾನೆ.
ತ್ರಿಪ್ಪುನಿತುರಾ ದಲ್ಲಿ ಶುಕ್ರವಾರ ಸಂಜೆ 5.40ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಕೋರ ವಡಕ್ಕೆಕೋಟಾ ಮೂಲದ ರಾಜೇಶ್ ಟಿಎಸ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲವು ಲಾಟರಿ ಟಿಕೆಟ್ಗಳು ಬೆಂಕಿಗೆ ಆಹುತಿಯಾಗಿದ್ದು, 1.5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಜೇಶ್ ಕೈಯಲ್ಲಿ ಗ್ಯಾಸೋಲಿನ್ ಬಾಟಲ್ ಹಿಡಿದುಕೊಂಡು ಶಾಪ್ ಕಡೆಗೆ ಹೋಗಿ ಬೆಂಕಿ ಹಚ್ಚಿದ್ದಾನೆ.
ಕಾರ್ಮಿಕರು ನೀರು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಅನಾಹುತಕ್ಕೊಳಗಾದ ಸಂಸ್ಥೆಯ ಸಿಬ್ಬಂದಿ ಪ್ರಕಾರ ಆರೋಪಿ ರಾಜೇಶ್ ಸಮೀಪದಲ್ಲೇ ಲಾಟರಿ ಟಿಕೆಟ್ ಮಾರಾಟ ಮಾಡುತ್ತಾರೆ. ಈ ದಾಳಿಯ ಉದ್ದೇಶ ಇನ್ನೂ ನಿಗೂಢವಾಗಿದೆ.
ಶುಕ್ರವಾರ ಸಂಜೆ 6 ಗಂಟೆಗೆ ಲಾಟರಿ ಏಜೆನ್ಸಿಗೆ ಬೆಂಕಿ ಹಚ್ಚುವುದಾಗಿ ರಾಜೇಶ್ ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ಬೆದರಿಕೆ ಹಾಕಿದ್ದ. “ನಮಗೆ EMS ಅಡಿಯಲ್ಲಿ ಅಸ್ತಿತ್ವದಲ್ಲಿದ್ದ ನಿಜವಾದ ಕಮ್ಯುನಿಸಂನ ಅಗತ್ಯವಿದೆ. ಜನರ ಸೇವೆಗೆ ಸಿದ್ಧರಾಗಿರುವ ಸಹೋದರರು ಬೇಕು’ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ.