ಈ ವ್ಯಕ್ತಿ ಬೆಂಕಿಯೊಂದಿಗೆ ಸರಸವಾಡುವುದು ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಬಾಯಿಯಲ್ಲಿ ತುಂಬಿಕೊಂಡ ದ್ರವವನ್ನು ಬೆಂಕಿಯ ಮೇಲೆ ಉಗಿಯುತ್ತಿದ್ದಂತೆಯೇ ಧಗ್ಗನೇ ಅಗ್ನಿಯ ಜ್ವಾಲೆ ಉಂಟಾಗಿ ಆತ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವಂತೆ ಭಾಸವಾಗುತ್ತದೆ.
ಈ ರೋಮಾಂಚಕಾರಿ ಪ್ರದರ್ಶನವನ್ನು ಕಂಡ ನೆಟ್ಟಿಗರು ಹುಬ್ಬೇರಿಸಿ ಈತನ ಸಾಹಸಕ್ಕೆ ಫಿದಾ ಆಗಿದ್ದಾರೆ.
ರೋಮಾಂಚಕಾರಿ ವಿಡಿಯೋಗಳನ್ನು ಹಂಚಿಕೊಳ್ಳುವುದರಲ್ಲಿ ಹೆಸರುವಾಸಿಯಾಗಿರುವ ಟೆಕ್ ಝಡ್ ಎಕ್ಸ್ ಪ್ರೆಸ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ನೆಟ್ಟಿಗರನ್ನು ಅರೆಕ್ಷಣ ಗೊಂದಲಕ್ಕೀಡು ಮಾಡುತ್ತಿದೆ.
ಸಾವಿನ ಮನೆಯಲ್ಲಿ ಬೆಲ್ಲಿ ಡಾನ್ಸ್ ಮಾಡಿ ರಂಜಿಸಿದ ಮಹಿಳೆ
ಈ ವ್ಯಕ್ತಿ ತನ್ನ ಬಾಯೊಳಗೆ ದ್ರವವನ್ನು ಹಾಕಿಕೊಳ್ಳುತ್ತಾನೆ. ನಂತರ ಉರಿಯುತ್ತಿರುವ ಕೋಲನ್ನು ತನ್ನ ಬಾಯಿ ಬಳಿ ತಂದು ಆ ಬೆಂಕಿಯ ಮೇಲೆ ದ್ರವವನ್ನು ಉಗಿಯುತ್ತಾನೆ. ಆಗ ಅಗ್ನಿ ಜ್ವಾಲೆ ಚಿಮ್ಮಿ ರೋಮಾಂಚನವನ್ನು ಉಂಟುಮಾಡುತ್ತದೆ. ಆತನ ಗಾತ್ರಕ್ಕಿಂತ ದೊಡ್ಡದಾದ ಮಟ್ಟದಲ್ಲಿ ಅಗ್ನಿ ಜ್ವಾಲೆ ಉಂಟಾಗಿ, ಅದರಿಂದ ಆ ವ್ಯಕ್ತಿ ತಪ್ಪಿಸಿಕೊಳ್ಳುವಂತೆ ಭಾಸವಾಗುತ್ತದೆ. ಇದು ಒಂದು ರೀತಿಯಲ್ಲಿ ಡ್ರ್ಯಾಗನ್ ಶೈಲಿಯಲ್ಲಿರುತ್ತದೆ.
ಈ ಸ್ಟಂಟ್ ಮಾಡುವ ವ್ಯಕ್ತಿಯ ಬಗ್ಗೆ ಹೇಳುವುದಾದರೆ ಆತ ತನ್ನ ಬಾಯಿಯೊಳಗೆ ಪ್ಯಾರಾಫಿನ್ ಅಥವಾ ಸೀಮೆಎಣ್ಣೆಯನ್ನು ಹಾಕಿಕೊಳ್ಳುತ್ತಾನೆ. ನಂತರ ಬೆಂಕಿ ಇರುವ ಕೋಲಿಗೆ ಸಿಂಪಡಣೆ ರೀತಿಯಲ್ಲಿ ಆ ದ್ರವವನ್ನು ಬಾಯಿಯಿಂದ ಹೊರಹಾಕಿದಾಗ ಅದು ಧಗ್ಗನೆ ಹತ್ತಿಕೊಳ್ಳುತ್ತದೆ.
ಈ ವಿಡಿಯೋವನ್ನು 3,10,000 ಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದ್ದು, 11,408 ಜನರು ಲೈಕ್ ಮಾಡಿದ್ದಾರೆ.