ಚಳಿಗಾಲದಲ್ಲಿ ತಣ್ಣನೆ ನೀರಿಗೆ ಇಳಿಯುವುದು ಎಂದು ಎಂಥವರಿಗೂ ಮೈ ಝುಂ ಎನ್ನುತ್ತದೆ. ಆದರೆ ಇಂಥ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡುವುದು ಅನಿವಾರ್ಯ ಎನಿಸಿದಾಗ, ಜನರು ನೀರಿಗೆ ಇಳಿಯಲು ಹಿಂದೆಮುಂದೆ ನೋಡುವುದೂ ಇದೆ. ಆದರೆ ಅಂಥವರ ಪರವಾಗಿ ವ್ಯಕ್ತಿಯೊಬ್ಬ ಫ್ರೀಜ್ ಆಗಿರುವ ನೀರಿಗೆ ಇಳಿದು ಇದೀಗ ಭಾರಿ ಸುದ್ದಿಯಾಗಿದ್ದಾನೆ.
ಜನರು ತಮ್ಮ ಪರವಾಗಿ ಪವಿತ್ರ ಸ್ನಾನ ಮಾಡಲು ಈ ವ್ಯಕ್ತಿಗೆ ತಲಾ 10 ರೂಪಾಯಿಗಳನ್ನು ನೀಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಇದಾಗಲೇ ಈ ವಿಡಿಯೋ 8೦ ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಟ್ವಿಟರ್‌ನಲ್ಲಿ ಬಳಕೆದಾರ ಅಶುತೋಷ್ ಶುಕ್ಲಾ ಹಂಚಿಕೊಂಡಿದ್ದಾರೆ. ಈ ವಿಡಿಯೀದಲ್ಲಿ ಸರೋವರದಂತೆ ಕಾಣುವ ಮಧ್ಯದಲ್ಲಿ ಅರೆಬೆತ್ತಲೆ ವ್ಯಕ್ತಿಯೊಬ್ಬರು ರೇಲಿಂಗ್ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ಶೀತ ವಾತಾವರಣದ ನಡುವೆ ಘನೀಕರಿಸುವ ನೀರಿಗೆ ಈತ ಇಳಿದಿದ್ದಾನೆ. ಯಾರಾದರೂ 10 ರೂಪಾಯಿ ನೀಡಿದರೆ ಅವರ ಪರವಾಗಿಯೂ ತಾನು ಪವಿತ್ರ ಸ್ನಾನ ಮಾಡುವುದಾಗಿ ಹೇಳಿದ್ದಾನೆ.
ಹೀಗೂ ಇದೆಯಾ ಎಂದು ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಎಲ್ಲರ ಪುಣ್ಯವೂ ಇವನೊಬ್ಬನಿಗೇ ಬರುತ್ತದೆ ಎಂದು ಹಲವರು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.