alex Certify WATCH: ಗೂಳಿಗೆ ಕಿರಿಕ್ ಮಾಡಲು ಹೋಗಿ ತಾನೇ ದಾಳಿಗೊಳಗಾದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಗೂಳಿಗೆ ಕಿರಿಕ್ ಮಾಡಲು ಹೋಗಿ ತಾನೇ ದಾಳಿಗೊಳಗಾದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಲಕ್ಷಣ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ, ಕೋಪಗೊಂಡ ಗೂಳಿಯೊಂದು ವ್ಯಕ್ತಿಯೊಬ್ಬರನ್ನು ನಿರ್ದಯವಾಗಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ.

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿಟ್‌ಕಾಮ್ ದಿ ಆಫೀಸ್‌ನ ಬ್ರಿಟಿಷ್ ಆವೃತ್ತಿಯನ್ನು ರಚಿಸಲು ಪ್ರಸಿದ್ಧರಾದ ರಿಕಿ ಗೆರ್ವೈಸ್ ಎಂಬ ಬಳಕೆದಾರರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆಚ್ಚಿಬೀಳಿಸಿದೆ.

ಕಪ್ಪು ಟಿ-ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ಗೂಳಿಯ ತಲೆಯ ಬಳಿ ತನ್ನ ಕೈಯನ್ನು ಮೇಲಕ್ಕೆತ್ತಿದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಪ್ರಾಣಿಯು ಈ ಸಂಜ್ಞೆಯಿಂದ ಕೋಪಗೊಂಡು ತನ್ನ ಸಮತೋಲನವನ್ನು ಕಳೆದುಕೊಂಡು ನೆಲಕ್ಕೆ ಬಿದ್ದ ವ್ಯಕ್ತಿಯತ್ತ ಹಾರಿದಂತಿದೆ.

ಗೂಳಿಯು ಮೊದಲು ತನ್ನ ಕೊಂಬುಗಳಿಂದ ದಾಳಿ ಮಾಡಿದೆ. ಸ್ಥಳದಿಂದ ನಿರ್ಗಮಿಸುವ ಮೊದಲು ವ್ಯಕ್ತಿಯ ಮುಖದ ಮೇಲೆ ಕಾಲಿಟ್ಟಿದೆ. ಇದರಿಂದ ಆತಂಕಗೊಂಡ ಗುಂಪಿನಲ್ಲಿದ್ದ ಜನರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಎತ್ತಿಕೊಳ್ಳಲು ಮುಂದಾದರು.

ಆಕ್ರೋಶಗೊಂಡ ಗೂಳಿ ಆ ಪ್ರದೇಶದಿಂದ ಪಲಾಯನ ಮಾಡುವ ಮೊದಲು ವ್ಯಕ್ತಿಯ ಹೊಟ್ಟೆಯ ಮೇಲೆ ತುಳಿದಿದೆ. ಕಾಮೆಂಟ್‌ ವಿಭಾಗವು ಮಿಶ್ರ ಪ್ರತಿಕ್ರಿಯೆಗಳಿಂದ ತುಂಬಿದೆ. ಕೆಲವರು ಪ್ರಾಣಿಯಿಂದ ಬಲವಾದ ಹೊಡೆತಗಳನ್ನು ಅನುಭವಿಸಿದ್ದಕ್ಕಾಗಿ ವ್ಯಕ್ತಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇತರರು ಗೂಳಿಗೆ ಕಿರಿಕ್ ಮಾಡಿದ್ದಕ್ಕೆ ಸರಿಯಾದ ಶಿಕ್ಷೆ ಅನುಭವಿಸಿದ್ದಾನೆ ಎಂದಿದ್ದಾರೆ.

https://twitter.com/rickygervais/status/1563952951051386880?ref_src=twsrc%5Etfw%7Ctwcamp%5Etweetembed%7Ctwterm%5E1563952951051386880%7Ctwgr%5E3ed6e05629aeeb5926988c8f3e23cacb69d34850%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-man-mauled-by-bull-on-road-chilling-video-caught-on-tape-5854591.html

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...