
ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್ ಪ್ರದೇಶದಲ್ಲಿ ಜರುಗಿದ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ತನ್ನ ಕಾರಿನಲ್ಲಿ ಬೈಕೊಂದಕ್ಕೆ ಢಿಕ್ಕಿ ಹೊಡೆದ ಬಳಿಕ ಸ್ಥಳೀಯರೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುವ ಯತ್ನದಲ್ಲಿ ಹೀಗೆ ಇನ್ನಷ್ಟು ವಾಹನಗಳಿಗೆ ಗುದ್ದಿದ್ದಾನೆ.
ಪಾರ್ಕಿಂಗ್ ಮಾಡಲಾಗಿದ್ದ ಬೈಕುಗಳಿಗೆ ಗುದ್ದಿದ ಕಾರನ್ನು ವಿಡಿಯೋದಲ್ಲಿ ನೋಡಬಹುದು.
ಘಟನೆಯು ತಮ್ಮ ಗಮನಕ್ಕೆ ಬರುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಪಾದಿತನನ್ನು ವಶಕ್ಕೆ ಪಡೆದಿದ್ದಾರೆ.